ಕರ್ನಾಟಕ

karnataka

ಅಭಿಮಾನಿಗಳತ್ತ ಕೈಬೀಸಿದ ಶಾರುಖ್

ETV Bharat / videos

ಅಭಿಮಾನಿಗಳತ್ತ ಕೈಬೀಸಿದ ಶಾರುಖ್​.. ನಮ್ಮ ಪಂದ್ಯಗಳು ಹೀಗೆ ಗೆಲ್ತಾ ಇರ್ಲಿ ಎಂದ ಜೂಹಿ - ಅಭಿಮಾನಿಗಳತ್ತ ಕೈಬೀಸಿದ ಶಾರುಖ್​

By

Published : Apr 7, 2023, 7:11 AM IST

ಕೋಲ್ಕತ್ತಾ, ಪಶ್ಚಿಮ ಬಂಗಾಳ: ಕಳೆದ ದಿನ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ವಿಫಲತೆ ಕಂಡು 81 ರನ್​ಗಳಿಂದ ಹೀನಾಯ ಸೋಲು ಕಂಡಿತು. ಮೊದಲ ಪಂದ್ಯದಲ್ಲಿ ಅಬ್ಬರಿಸಿದ ತಂಡದ ಆಟ ಎರಡನೇ ಪಂದ್ಯದಲ್ಲಿ ಕಾಣಲಿಲ್ಲ. ಹೀಗಾಗಿ ಅಭಿಮಾನಿಗಳು ಕೊಂಚ ಬೇಸರ ವ್ಯಕ್ತಪಡಿಸಿದರು.  ಇನ್ನು ಪಂದ್ಯ ಮುಗಿದ ಬಳಿಕ ಮನೆಗೆ ತೆರಳುತ್ತಿದ್ದಾಗ ಬಾಲಿವುಡ್​ ನಟ ಶಾರುಖ್​ ಖಾನ್​ ಈಡನ್ ಗಾರ್ಡನ್ಸ್‌ ಮೈದಾನ ಹೊರಗಡೆ ನಿಂತ ಅಭಿಮಾನಿಗಳತ್ತ ಕೈ ಬೀಸಿದರು. ಬಳಿಕ ಶಾರುಖ್​ ಖಾನ್​ ತಮ್ಮ ಮನೆಯತ್ತ ಪ್ರಯಾಣ ಬೆಳಸಿದರು. 

ನಮ್ಮ ತಂಡದ ಪ್ರದರ್ಶನದಿಂದ ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಎಲ್ಲ ಪಂದ್ಯಗಳು ಹೀಗೆಯೇ ಕೊನೆಗೊಳ್ಳಲಿ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಕೋಲ್ಕತ್ತಾ ನೈಟ್ ರೈಡರ್ಸ್.. ಕೋಲ್ಕತ್ತಾ ನೈಟ್ ರೈಡರ್ಸ್‌.. ಎಂದು ಬಾಲಿವುಡ್​ ನಟಿ ಮತ್ತು ಸಹ-ಮಾಲೀಕತ್ವ ಹೊಂದಿರುವ ಜೂಹಿ ಚಾವ್ಲಾ ಅವರು ತಮ್ಮ ಸಂತಸ ಹಂಚಿಕೊಂಡರು. ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬಳಿಕ ಜೂಹಿ ಚಾವ್ಲಾ ತಮ್ಮ ವಾಹನದಲ್ಲಿ ನಿರ್ಗಮಿಸಿದರು.

ಓದಿ:IPL 2023: ಕೆಕೆಆರ್ ದಾಳಿಗೆ ಆರ್​ಸಿಬಿ ತತ್ತರ: 123 ರನ್​ಗೆ ಸರ್ವಪತನ, ಹೀನಾಯ ಸೋಲು 

ABOUT THE AUTHOR

...view details