ಸರ್ಜಾಪುರದಲ್ಲಿ ಸರಣಿ ರಸ್ತೆ ಅಪಘಾತ: ಇಬ್ಬರಿಗೆ ಗಾಯ, ವಿಡಿಯೋ - ರಸ್ತೆ ಅಪಘಾತ
ಬೆಂಗಳೂರು: ವೇಗದ ಚಾಲನೆಯಿಂದ ನಿಯಂತ್ರಣ ಕಳೆದುಕೊಂಡ ಚಾಲಕ ಸರಣಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಈ ಘಟನೆ ಗುರುವಾರ ಮಧ್ಯಾಹ್ನ ಎಚ್ ಎಸ್ ಆರ್ ಲೇಔಟ್ ಸಂಚಾರಿ ಠಾಣಾ ವ್ಯಾಪ್ತಿಯ ಸರ್ಜಾಪುರ ರಸ್ತೆಯ ವಿಪ್ರೋ ಗೇಟ್ ಬಳಿ ನಡೆದಿದೆ. ಓವರ್ ಸ್ಟೀಡ್ನಿಂದಾಗಿ ಮುಂದೆ ಹೋಗುತ್ತಿದ್ದ ಒಂದು ಬೈಕ್, ಒಂದು ಆಟೋ ಹಾಗೂ ಐದು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ. ದುರ್ಘಟನೆಯಲ್ಲಿ ಜೊಮೊಟೊ ಡೆಲಿವರಿ ಬಾಯ್ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದೆ ಚಲಿಸುತಿದ್ದ ಕಾರಿನ ಡ್ಯಾಶ್ ಬೋರ್ಡ್ನಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಈ ಸಂಬಂಧ ಎಚ್ ಎಸ್ ಆರ್ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 3, 2023, 8:37 PM IST