ಕರ್ನಾಟಕ

karnataka

ETV Bharat / videos

ಬೀದರ್ ಕೋಟೆಯ ತುತ್ತತುದಿಯಲ್ಲಿ ನಿಂತು ಯುವಕರ ಸೆಲ್ಫಿ ಹುಚ್ಚು- ವಿಡಿಯೋ - ಕೆಎಸ್‌ಆರ್‌ಪಿಯ 4 ಪಡೆಗಳು ಮತ್ತು ಡಿಎಆರ್‌ 4 ಪಡೆ

By

Published : Jan 5, 2023, 10:47 AM IST

Updated : Feb 3, 2023, 8:38 PM IST

ಬೀದರ್​: ಜನವರಿ 7, 8 ಮತ್ತು 9ರಂದು ಬೀದರ್‌ ಉತ್ಸವ ನಡೆಯಲಿದೆ. ಇದಕ್ಕಾಗಿ ಪೊಲೀಸ್‌ ಇಲಾಖೆ ಭಾರಿ ಬಂದೋಬಸ್ತ್‌ ಮಾಡಿಕೊಂಡಿದೆ. ಸುಮಾರು 1,500 ಪೊಲೀಸ್‌ ಹಾಗೂ 500 ಜನ ಹೋಂಗಾರ್ಡ್‌ಗಳಲ್ಲದೆ ಕೆಎಸ್‌ಆರ್‌ಪಿಯ 4 ಮತ್ತು ಡಿಎಆರ್‌ 4 ಪಡೆಗಳೊಂದಿಗೆ ಸುಮಾರು 2 ಸಾವಿರ ಅಧಿಕಾರಿಗಳು, ಸಿಬ್ಬಂದಿಯಿಂದ ಸರ್ಪಗಾವಲು ಹಾಕಲಾಗುತ್ತಿದೆ. ಇಷ್ಟೆಲ್ಲಾ ಭದ್ರತೆ ಇದ್ದರೂ ಯುವಕರು ಕೋಟೆಯ ತುದಿ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ. ಪೊಲೀಸರ​ ಕಣ್ಣು ತಪ್ಪಿಸಿ ಕೋಟೆ ಮೇಲೆ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಯಾರು ಅನುಮತಿ ನೀಡಿದರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
Last Updated : Feb 3, 2023, 8:38 PM IST

ABOUT THE AUTHOR

...view details