ಹೆಚ್ಚಿದ ಸಮುದ್ರದ ಅಬ್ಬರ.. ಮನೆಗಳಿಗೆ ಅಪ್ಪಳಿಸುತ್ತಿರುವ ಅಲೆಗಳು - ದಕ್ಷಿಣ ಕನ್ನಡಲ್ಲಿ ಮಳೆ
ಉಳ್ಳಾಲ(ದಕ್ಷಿಣ ಕನ್ನಡ):ಕಳೆದೆರಡು ದಿನಗಳಿಂದ ಉಳ್ಳಾಲ ತಾಲೂಕಿನಾದ್ಯಂತ ಮಳೆ ಸುರಿಯುತ್ತಿದ್ದು, ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಉಳ್ಳಾಲದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಬೆಳಗ್ಗೆ ಮಳೆ ಧಾರಾಕಾರವಾಗಿ ಸುರಿದರೆ ಬಳಿಕ ಹನಿ ಮಳೆ ಸಂಜೆಯವರೆಗೆ ಇರಲಿದೆ.
ಮಳೆ ಆರಂಭವಾಗುತ್ತಿದ್ದಂತೆ ರಸ್ತೆಗಳಲ್ಲಿ ಹೊಂಡಗಳು ಬಿದ್ದಿದ್ದು, ಚರಂಡಿ ಸಮಸ್ಯೆಯಿಂದ ರಸ್ತೆಯಲ್ಲಿ ನೀರು ಹರಿದು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ. ವಿಪರ್ಯಾಸ ಎಂದರೆ ಈ ಬಾರಿ ಕರಾವಳಿ ಜಿಲ್ಲೆಯಲ್ಲಿ ಮಳೆ ಆರಂಭವಾದರೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಮುಂದುವರೆದಿದೆ. ಆದರೆ, ಸತತವಾಗಿ ಮಳೆ ಬಂದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಆಶಾವಾದ ಈ ಭಾಗದ ಜನರಲ್ಲಿದೆ.
ಹೆಚ್ಚಿದ ಸಮುದ್ರದ ಅಬ್ಬರ : ಕೈಕೋ, ಸೀಗ್ರೌಂಡ್, ಮೊಗವೀರಪಟ್ಣ, ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಸಮುದ್ರದ ಅಲೆಗಳು ದಡಕ್ಕಪ್ಪಳಿಸುತ್ತಿದೆ. ಉಚ್ಚಿಲ ಬಟ್ಟಪ್ಪಾಡಿಯಲ್ಲಿ ತಾತ್ಕಾಲಿಕ ಕಾಮಗಾರಿ ನಡೆಯುತ್ತಿದ್ದರೂ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದೆ. ಕಡಲ್ಕೊರೆತಕ್ಕೆ ಸಮುದ್ರ ತೀರದ ರಸ್ತೆ, ಮನೆಗಳು ಸಮುದ್ರ ಪಾಲಾಗುತ್ತಿದೆ.
ಇದನ್ನೂ ಓದಿ:ಗಂಗಾವತಿಯಲ್ಲಿ ಚಿರತೆ ಮರಿ.. ಸಿದ್ದಾಪುರದಲ್ಲಿ ಕರಡಿ ಪ್ರತ್ಯಕ್ಷ