ಗೌಮುಖ ತಪೋವನದಲ್ಲಿ ಸಿಲುಕಿದ್ದ 7 ಮಂದಿ ಟ್ರೆಕ್ಕರ್ಸ್ಗಳನ್ನ ರಕ್ಷಿಸಿದ ಎಸ್‌ಡಿಆರ್‌ಎಫ್ ತಂಡ! - undefined
ಉತ್ತರಕಾಶಿ (ಉತ್ತರಾಖಂಡ) :ಗೌಮುಖ ತಪೋವನ ಟ್ರೆಕ್ಕಿಂಗ್ ಮಾಡುವಾಗ ಹಿಮಪಾತದಲ್ಲಿ ಸಿಲುಕಿದ್ದ 7 ಮಂದಿಯನ್ನು ಎಸ್‌ಡಿಆರ್‌ಎಫ್ ತಂಡ ಸುರಕ್ಷಿತವಾಗಿ ರಕ್ಷಿಸಿದೆ. ವೈಪರೀತ್ಯ ಹವಾಮಾನದಿಂದಾಗಿ ಎಲ್ಲರೂ ಭಾರಿ ಹಿಮಪಾತದಿಂದಾಗಿ ದಾರಿ ಮಧ್ಯೆ ಸಿಲುಕಿಕೊಂಡಿದ್ದರು. ಇದರಲ್ಲಿ ಒಬ್ಬ ಮಾರ್ಗದರ್ಶಿ, 3 ಟ್ರೆಕ್ಕರ್ಸ್ ಮತ್ತು 3 ಪೋರ್ಟರ್‌ಗಳು ಸಿಲುಕಿಕೊಂಡಿದ್ದರು. ಈ ವೇಳೆ ವಾಕಿ ಟಾಕಿ ಮೂಲಕ ಸರಕಾರ ಹಾಗೂ ಜಿಲ್ಲಾಡಳಿತದಿಂದ ಹೆಲಿಕಾಪ್ಟರ್ ಸೇವೆ ದಗಿಸುವಂತೆ ಮನವಿ ಮಾಡಿದ್ದರು.
ಇನ್ನು ಮಾಹಿತಿ ಸಿಕ್ಕ ತಕ್ಷಣವೇ ಎಸ್‌ಡಿಆರ್‌ಎಫ್ ಮತ್ತು ಅರಣ್ಯ ಇಲಾಖೆಯ ತಂಡ ತಪೋವನಕ್ಕೆ ತೆರಳಿದೆ. ಎಸ್‌ಡಿಆರ್‌ಎಫ್ ತಂಡವು ಸುಮಾರು 24 ಕಿಲೋಮೀಟರ್ ನಡೆದು ಟ್ರೆಕ್ಕರ್ಸ್ ಇರುವ ಸ್ಥಳವನ್ನು ಗುರುತಿಸಿತ್ತು. ನಂತರ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಸುರಕ್ಷಿತವಾಗಿ ಹಿಮಪಾತದಲ್ಲಿ ಸಿಲುಕಿಗೊಂಡಿದ್ದ ಟ್ರೆಕ್ಕರ್ಸ್ಗಳನ್ನು ತಡರಾತ್ರಿ ಗಂಗೋತ್ರಿಗೆ ಕರೆತಂದ್ದಾರೆ.
ಈ ಸಂದರ್ಭದಲ್ಲಿ ಉತ್ತರಕಾಶಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ಮಾತನಾಡಿ, ಮೇ 30 ರಂದು ವೃಂದಾವನ ಮತ್ತು ಡೆಹ್ರಾಡೂನ್‌ನಿಂದ 3 ಟ್ರೆಕರ್ಸ್, ಟ್ರೆಕ್ಕಿಂಗ್ ಏಜೆನ್ಸಿ ಮೂಲಕ ಗಂಗೋತ್ರಿಯಿಂದ ತಪೋವನಕ್ಕೆ ತೆರಳಿದ್ದರು. ಇದರಲ್ಲಿ ಟ್ರೆಕರ್ಸ್ಗಳಾದ ರಾಹುಲ್ ಚಾಂಡೆಲ್, ದೇವೇಶ್ ಕುಮಾರ್ ತೋಮರ್ ಮತ್ತು ಮನಮೋಹನ್ ತೋಮರ್ ಸೇರಿದ್ದರು. ಇದಲ್ಲದೇ ಒಬ್ಬ ಗೈಡ್ ಮತ್ತು ಮೂವರು ಪೋರ್ಟರ್‌ಗಳು ಕೂಡ ಅವರ ಜೊತೆ ಹೋಗಿದ್ದರು. ಬುಧವಾರದಂದು ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತದಿಂದಾಗಿ, ಎಲ್ಲರೂ ತಮ್ಮ ತಮ್ಮ ಟೆಂಟ್‌ಗಳಲ್ಲಿದ್ದರು, ಆದರೆ ಮೊದಲ ಬಾರಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಈ ಮೂವರು ಯುವಕರು ಭಯಗೊಂಡದ್ದರು ಎಂದು ತಿಳಿಸಿದ್ದಾರೆ.
ಮತ್ತೊದೆಡೆ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು, ಸ್ಥಳೀಯ ಟ್ರೆಕ್ಕಿಂಗ್ ಏಜೆನ್ಸಿ ಮೌಂಟೇನ್ ಹೈಕರ್ಸ್ ಅವರ ತಪ್ಪನ್ನು ಪರಿಗಣಿಸಿ 3 ದಿನಗಳಲ್ಲಿ ಈ ಘಟನೆ ಸಂಬಂಧ ವಿವರಣೆಯನ್ನು ಕೇಳಿದೆ.
ಇದನ್ನೂ ಓದಿ :ಶಟಲ್ ಆಡುವಾಗ ಹೃದಯಾಘಾತದಿಂದ ವ್ಯಕ್ತಿ ಸಾವು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ
TAGGED:
Gaumukh tapovana