ವರನ ಸ್ವಾಗತಿಸಲು ನಿಂತಿದ್ದ ವಧುವಿನ ಕುಟುಂಬದ ಮೇಲೆ ಹರಿದ ವಾಹನ: ಮೂವರ ಸಾವು
ಬೆರ್ಹಾಂಪುರ್ (ಒಡಿಶಾ):ವರನನ್ನು ಸ್ವಾಗತಿಸಿಲು ನಿಂತಿದ್ದ ವಧುವಿನ ಕಡೆಯವರ ಮೇಲೆ ಸ್ಕಾರ್ಪಿಯೋ ಕಾರು ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 12 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಬ್ರಹ್ಮಪುರ ನಗರದ ಗೋಪಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡಿಯಾಪಲ್ಲಿ ಗ್ರಾಮದಲ್ಲಿ ನಡೆದಿದೆ. ಸ್ವಪ್ನಾ ರೆಡ್ಡಿ (22), ಸಂಜು ರೆಡ್ಡಿ (23) ಮತ್ತು ಲಾಂಜಿಪಲ್ಲಿ ಕೇಶವ ನಗರದ ಭಾರತಿ ರೆಡ್ಡಿ (12) ಮೃತರು. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಕುಟುಂಬದ ಸದಸ್ಯರೊಬ್ಬರ ಮಾಹಿತಿ ಪ್ರಕಾರ ವರನನ್ನು ಸ್ವಾಗತಿಸಲು ವಧುವಿನ ಕುಟುಂಬ ಸುಮಾರು 30 ಸದಸ್ಯರು ಕಾಯುತ್ತಿದ್ದರು. ಈ ವೇಳೆ, ವೇಗಾವಗಿ ಬಂದ ಸ್ಕಾರ್ಪಿಯೋ ವಾಹನವೊಂದು ವಧುವಿನ ಕುಟುಂಬ ಸದಸ್ಯರ ಮೇಲೆ ಹರಿದಿದೆ. ಸುಮಾರು 12ಕ್ಕೂ ಹೆಚ್ಚು ಜನ ಗಾಯಗೊಂಡು ಮೂರು ಜನ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ವಾಹನ ಸವಾರ ಸ್ಥಳದಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಅಲ್ಲಿದ್ದ ಸ್ಥಳೀಯರ ಸವಾರನನ್ನು ಹಿಡಿದು ಥಳಿಸಿದ್ದಾರೆ. ನಂತರ ಗೋಪಾಲಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ ವಾಹನ ಸವಾರ ಸಾವು: ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆ