ಸೈಕಲ್ ಮೇಲೆ ಬಂದು ಸ್ಕೂಟರ್ ಕದ್ದೊಯ್ದ ಖದೀಮ: ಸಿಸಿಟಿವಿಯಲ್ಲಿ ಕೃತ್ಯ ಸೆರೆ - ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಧಾರವಾಡ: ಸೈಕಲ್ ಮೇಲೆ ಬಂದು ಸ್ಕೂಟರ್ ಕದ್ದೊಯ್ದ ಘಟನೆ ಧಾರವಾಡದ ಡಿಪೋ ಸರ್ಕಲ್ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮಧ್ಯರಾತ್ರಿ ಸೈಕಲ್ ಮೇಲೆ ಬಂದಿರುವ ಖದೀಮನೋರ್ವ ಮಲ್ಲೇಶಪ್ಪ ನೂಲ್ವಿ ಎಂಬುವವರ ಮನೆ ಮುಂದಿಟ್ಟ ಎಕ್ಸೆಲ್ ಸ್ಕೂಟರ್ ಕದ್ದು ಪರಾರಿಯಾಗಿದ್ದಾನೆ. ಆರೋಪಿಯ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರಮುಖ ರಸ್ತೆಯಾಗಿದ್ದರೂ ರಾಜಾರೋಷವಾಗಿ ಕಳ್ಳತನ ಮಾಡಲಾಗಿದೆ. ಇಲ್ಲಿ ಪೊಲೀಸರು ಗಸ್ತು ಮರೆತಿದ್ದಾರೆ. ಗಸ್ತು ವಿಫಲವಾದ ಹಿನ್ನೆಲೆ ಕಳ್ಳತನಗಳು ಸಲೀಸಾಗಿ ನಡೆಯುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಹರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಅಂದಾಜು 40 ವರ್ಷ ವಯಸ್ಸಿನ ಪುರುಷನ ಶವ ಇದಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಈತ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಈತ ಯಾರು?, ಎಲ್ಲಿಯವನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:₹1 ಕೋಟಿಯ ಚಿನ್ನದ ಗಟ್ಟಿ ಕಸಿದು ಪರಾರಿಯಾದವರು ರೈಲ್ವೆ ಪೊಲೀಸ್ ಸಿಬ್ಬಂದಿ!