ಕರ್ನಾಟಕ

karnataka

ಚಿಕ್ಕೋಡಿ: ಖಾಸಗಿ ಶಾಲಾ‌ ಬಸ್ ಪಲ್ಟಿ, ಅಪಾಯದಿಂದ ಪಾರಾದ ವಿದ್ಯಾರ್ಥಿಗಳು

ETV Bharat / videos

ಚಿಕ್ಕೋಡಿ: ಖಾಸಗಿ ಶಾಲಾ‌ ಬಸ್ ಪಲ್ಟಿ, ಅಪಾಯದಿಂದ ಪಾರಾದ ವಿದ್ಯಾರ್ಥಿಗಳು - ಚಿಕ್ಕೋಡಿಯಲ್ಲಿ ಬಸ್​ ಅಪಘಾತ

By ETV Bharat Karnataka Team

Published : Dec 18, 2023, 1:34 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಖಾಸಗಿ ಶಾಲೆಗೆ ಸೇರಿದ ಬಸ್​ ಒಂದು ಪಲ್ಟಿಯಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ಸಂಭವಿಸಿದೆ. ಸೋಮವಾರ ಬೆಳಗಿನ ಜಾವ ಘಟನೆ ನಡೆದಿದ್ದು, ದಾರಿ ಕಿರಿದಾಗಿದ್ದು, ಮುಂದಿನಿಂದ ಬರುತ್ತಿದ್ದ ಕಬ್ಬಿನ ಲಾರಿಗೆ ಸೈಡ್​ ಕೊಡುವ ವೇಳೆ ಶಾಲಾ ಬಸ್​ ರಸ್ತೆಯಿಂದ ಗುಂಡಿಗೆ ಪಲ್ಟಿಯಾಗಿದೆ. ಚಾಲಕ ಹಾಗೂ ನಿರ್ವಾಹಕ ಸೇರಿದಂತೆ 10 ವಿದ್ಯಾರ್ಥಿಗಳು ಬಸ್​ನಲ್ಲಿದ್ದರು. ಅದೃಷ್ಟವಶಾತ್ ಬಸ್​ನಲ್ಲಿದ್ದ ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ.

ನಿಯಂತ್ರಣ ತಪ್ಪಿ ಶಾಲಾ ಬಸ್​ ಪಲ್ಟಿ: ನಿಯಂತ್ರಣ ತಪ್ಪಿ ಶಾಲಾ ವಾಹನವೊಂದು ಕಾಲುವೆಗೆ ನುಗ್ಗಿ ಪಲ್ಟಿಯಾಗಿದ್ದ ಘಟನೆ ಆಂಧ್ರಪ್ರದೇಶದ ಕೋಡೂರು ತಾಲೂಕಿನ ವಿಶ್ವನಾಥಪಲ್ಲಿ ಬಳಿ ನವೆಂಬರ್​ನಲ್ಲಿ ನಡೆದಿತ್ತು. ಕೃಷ್ಣಾ ಜಿಲ್ಲೆಯ ಅವನಿಗಡ್ಡಾದ ಖಾಸಗಿ ಶಾಲೆಯೊಂದಕ್ಕೆ ಸೇರಿದ ಬಸ್​ ಅದಾಗಿತ್ತು. ಬಸ್​ನ ಸ್ಟೇರಿಂಗ್​ ರಾಡ್​ ತುಂಡಾಗಿ ಈ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್​ ಘಟನೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಗಾಯಗಳಾಗಿರಲಿಲ್ಲ.

ಇದನ್ನೂ ಓದಿ:ಶಾಲಾ ಬಸ್​ ಚಾಲಕನಿಗೆ ಹಠಾತ್ ಹೃದಯಾಘಾತ: ಸ್ಟೇರಿಂಗ್ ಕಂಟ್ರೋಲ್​ ಮಾಡಿ ದುರಂತ ತಪ್ಪಿಸಿದ ವಿದ್ಯಾರ್ಥಿನಿ

ABOUT THE AUTHOR

...view details