ಕರ್ನಾಟಕ

karnataka

ETV Bharat / videos

ಪ್ರವಾಹದ ನೀರಿನಲ್ಲಿ ಅರ್ಧದಷ್ಟು ಮುಳುಗಿದ ಶಾಲಾ ಬಸ್; ಪುಟ್ಟ ಮಕ್ಕಳನ್ನು ರಕ್ಷಿಸಿದ ಸ್ಥಳೀಯರು - ತೆಲಂಗಾಣ ಶಾಲಾ ಬಸ್ ಸುದ್ದಿ

By

Published : Jul 8, 2022, 2:27 PM IST

Updated : Feb 3, 2023, 8:24 PM IST

ತೆಲಂಗಾಣ: 25 ಮಕ್ಕಳಿದ್ದ ಖಾಸಗಿ ಶಾಲಾ ಬಸ್​ವೊಂದು ನೀರಿನಲ್ಲಿ ಸಿಲುಕಿಕೊಂಡ ಘಟನೆ ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯಲ್ಲಿ ನಡೆಯಿತು. ಇಲ್ಲಿನ ಮಾಚನಪಲ್ಲಿ-ಕೋಡೂರು ನಡುವೆ ರೈಲ್ವೆಯ ಕೆಳ ಸೇತುವೆ ಕಾಮಗಾರಿ ನಡೆಯುತ್ತಿದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈ ಅಂಡರ್​ ಬೈಪಾಸ್​ನಲ್ಲಿ ಸುಮಾರು 4-5 ಅಡಿಗಳಷ್ಟು ನೀರು ನಿಂತಿದೆ. ಇದನ್ನರಿಯದ ಬಸ್​ ಚಾಲಕ ಅಂಡರ್​ಪಾಸ್​ನಲ್ಲಿ ವಾಹನ ಚಲಾಯಿಸಿದ್ದಾನೆ. ರಾಮಚಂದ್ರಾಪುರ ಮತ್ತು ಸೂಗೂರುಗಡ್ಡ ತಾಂಡಾದಿಂದ ಶಾಲೆಗೆ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಅಂಡರ್​ಪಾಸ್​​ನ ನೀರಿನಲ್ಲಿ ಸಿಲುಕಿದೆ. ಬಸ್ಸಿನೊಳಗೆ ನೀರು ನುಗ್ಗಿದ್ದರಿಂದ ಚಾಲಕ ಗಾಬರಿಗೊಂಡು ಸ್ಥಳೀಯರನ್ನು ಸಹಾಯಕ್ಕೆ ಕರೆದಿದ್ದಾನೆ. ಸ್ಥಳೀಯರು ಕೂಡಲೇ ಸ್ಪಂದಿಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರ ತಂದರು.
Last Updated : Feb 3, 2023, 8:24 PM IST

ABOUT THE AUTHOR

...view details