ಸವದತ್ತಿಯಲ್ಲಿ ಹು - ಧಾ ಪಾಲಿಕೆ ಗುತ್ತಿಗೆ ನೌಕರರ ಮೇಲೆ ಲಾಠಿ ಪ್ರಹಾರ, ಹಲವರಿಗೆ ಗಾಯ - ಪಾಲಿಕೆ ಗುತ್ತಿಗೆ ನೌಕರರ ಮೇಲೆ ಲಾಠಿ ಪ್ರಹಾರ
ಬೆಳಗಾವಿ: ಸಂಬಳ ನೀಡುವಂತೆ ಹಾಗೂ 350ಕ್ಕೂ ಹೆಚ್ಚು ನೌಕರರನ್ನು ಕೆಲಸದಿಂದ ವಜಾ ಮಾಡಿರುವುದನ್ನು ಖಂಡಿಸಿ ಹು-ಧಾ ಮಹಾನಗರ ಪಾಲಿಕೆ ಗುತ್ತಿಗೆ ನೌಕರರರು ಮಂಗಳವಾರ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಕರ್ನಾಟಕ ಜಲಮಂಡಳಿ ಜಾಕ್ವೆಲ್ ಬಳಿ ಪ್ರತಿಭಟನೆ ಹಮ್ಮಿಕೊಂಡರು.
ಹು ಧಾ ಪಾಲಿಕೆ ಎದುರು ಕೆಲವು ದಿನಗಳಿಂದ ಪ್ರತಿಭಟನೆ ಕೈಗೊಂಡಿದ್ದ ಗುತ್ತಿಗೆ ನೌಕರರು, ಮಂಗಳವಾರ ಹುಬ್ಬಳ್ಳಿ-ಧಾರವಾಡಕ್ಕೆ ಸರಬರಾಜು ಆಗುವ ನೀರನ್ನು ಬಂದ್ ಮಾಡುವುದಕ್ಕೆ ಸವದತ್ತಿಗೆ ಆಗಮಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಬಂದು ಮನವಿ ಸ್ವೀಕರಿಸಿದರು.
ನಂತರ ಸವದತ್ತಿ ಜಾಕ್ವೇಲ್ ಬಂದ್ ಮಾಡಲು ಬ್ಯಾರಿಕೇಡ್ ತಳ್ಳಿ ಮುನ್ನುಗ್ಗುತ್ತಿದ್ದ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದರು. ಈ ವೇಲೆ ಪ್ರತಿಭಟನಾ ನಿರತರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ,ಚಿಕಿತ್ಸೆ ನೀಡಲಾಯಿತು.
ಇದನ್ನೂಓದಿ:ವಿಡಿಯೋ: ಜೋಡಿ ಚಿರತೆ ಬೋನಿಗೆ ಬಿದ್ದ ಸ್ಥಳದಲ್ಲೇ ಮತ್ತೊಂದು 8 ತಿಂಗಳ ಚಿರತೆ ಮರಿ ಸೆರೆ