ಸರಿಸ್ಕಾ ಅರಣ್ಯದಲ್ಲಿ ಹೆಚ್ಚುತ್ತಿದೆ ವ್ಯಾಘ್ರಗಳ ಸಂಖ್ಯೆ.. ಒಂದೇ ಬಾರಿ 3 ಹುಲಿಗಳನ್ನ ನೋಡಿ ದಂಗಾದ ಪ್ರವಾಸಿಗರು! - ಸರಿಸ್ಕಾ ಅರಣ್ಯದಲ್ಲಿ ಹೆಚ್ಚುತ್ತಿದೆ ವ್ಯಾಘ್ರಗಳ ಸಂಖ್ಯೆ
ಆಳ್ವಾರ್, ರಾಜಸ್ಥಾನ:ಜಗತ್ತಿನಾದ್ಯಂತ ತನ್ನ ವಿಶೇಷ ಗುರುತು ಹೊಂದಿರುವ ಸರಿಸ್ಕಾ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದರ ಬಗ್ಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಸುಲಭವಾಗಿ ಹುಲಿಯ ದರ್ಶನವಾಗುತ್ತದೆ. ಪ್ರವಾಸಿಗರು ಒಂದೇ ದಿನದಲ್ಲಿ ಮೂರು ಹುಲಿಗಳನ್ನು ನೋಡಿ ಉತ್ಸುಕಗೊಂಡರು. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ಸಂಖ್ಯೆ ಸಹ ಹೆಚ್ಚುತ್ತಿದೆ.
ಪ್ರಸ್ತುತ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 28 ಹುಲಿಗಳಿವೆ. ಬುಧವಾರದ ಸಫಾರಿಯಲ್ಲಿ ಪಾಂಡುಪೋಲ್‌ಗೆ ತೆರಳುವ ಮಾರ್ಗದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಪ್ರವಾಸಿಗರಿಗೆ ಮೊದಲ ಬಾರಿಗೆ ಮೂರು ಹುಲಿಗಳನ್ನು ನೋಡುವ ಭಾಗ್ಯ ಸಿಕ್ಕಿದೆ ಎಂದು ಸರಿಸ್ಕಾ ಮಾರ್ಗದರ್ಶಕರು ತಿಳಿಸಿದ್ದಾರೆ. ಸರಿಸ್ಕಾ ಅರಣ್ಯವು ಇತರ ಸ್ಥಳಗಳಿಗಿಂತ ಬಹಳ ಭಿನ್ನವಾಗಿದೆ. ಹಸಿರು, ಬೆಟ್ಟಗಳು, ಜಲಮೂಲಗಳು, ವನ್ಯಜೀವಿಗಳು ಮತ್ತು ಇಲ್ಲಿನ ವರ್ಣಚಿತ್ರಗಳು ಇಲ್ಲಿನ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಹಾಗಾಗಿಯೇ ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿನ ನೋಟ ನೋಡಿ ತುಂಬಾ ಖುಷಿ ಪಡುತ್ತಾರೆ ಎಂದು ಸರಿಸ್ಕಾ ಮಾರ್ಗದರ್ಶಕರು ಹೇಳುತ್ತಾರೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಉದ್ಯೋಗಾವಕಾಶ : ಆಳ್ವಾರ್ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಸ್ಥಳೀಯ ಉದ್ಯೋಗಗಳು ಹೆಚ್ಚಿವೆ. ಆಳ್ವಾರ್ ಮತ್ತು ಸುತ್ತಮುತ್ತಲಿನ ಎಲ್ಲ ಹೋಟೆಲ್‌ಗಳು ಭಾನುವಾರ, ಶನಿವಾರ ಮತ್ತು ಸರ್ಕಾರಿ ರಜಾದಿನಗಳಲ್ಲಿ ತುಂಬಿ ತುಳುಕುತ್ತವೆ. ಇದಲ್ಲದೇ ಯುವಕರು ಹೊಸ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ. ಸ್ಥಳೀಯ ಜನರು ಪ್ರವಾಸೋದ್ಯಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಜನರೂ ಈ ಕೆಲಸದಲ್ಲಿ ಮುಂದಾಗಿದ್ದಾರೆ.
ಓದಿ:ಬಂಡೀಪುರ: ಒಂದೆಡೆ ಹೈ ಸೆಕ್ಯೂರಿಟಿ, ಮತ್ತೊಂದೆಡೆ ಆನೆಗಳ ಜೊತೆ ಪ್ರವಾಸಿಗರ ಸೆಲ್ಫಿ
TAGGED:
Alwar news