ಕರ್ನಾಟಕ

karnataka

ಹೊಸಕೋಟೆ ಸ್ವಚ್ಛತೆ ನಾಲ್ಕು ಕಸ ಸಂಗ್ರಹ ಆಟೋಗಳನ್ನ ಕೊಡುಗೆ ನೀಡಿದ ಶಾಸಕ ಶರತ್​ ಬಚ್ಚೇಗೌಡ - ವಿಡಿಯೋ

ETV Bharat / videos

ಹೊಸಕೋಟೆ ಸ್ವಚ್ಛತೆಗೆ ನಾಲ್ಕು ಕಸ ಸಂಗ್ರಹ ಆಟೋ ಕೊಡುಗೆ ನೀಡಿದ ಶಾಸಕ ಶರತ್​ ಬಚ್ಚೇಗೌಡ - etv bharat karnataka

By

Published : Jul 9, 2023, 4:37 PM IST

ಹೊಸಕೋಟೆ(ಬೆಂಗಳೂರು): ನಗರವನ್ನ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಭಾನುವಾರದ ಬಾಡೂಟಕ್ಕೆ ಕೋಳಿಗಳನ್ನು ವಿತರಣೆ ಮಾಡುವ ಮೂಲಕ ಶಾಸಕ ಶರತ್ ಬಚ್ಚೇಗೌಡ ಕೃತಜ್ಞತೆ ಸಲ್ಲಿಸಿದರು. ಹೊಸಕೋಟೆಯ ನಗರಸಭೆಗೆ ಶಾಸಕ ಶರತ್​ ಬಚ್ಚೇಗೌಡ ತಮ್ಮ ಸ್ವಂತ ಖರ್ಚಿನಲ್ಲಿ ಕಸ ಸಂಗ್ರಹ ಆಟೋಗಳನ್ನ ಕೊಡುಗೆಯಾಗಿ ನೀಡಿದರು. ನಗರಸಭೆ ಅವರಣದಲ್ಲಿಂದು ನಡೆದ ಕಸ ಸಂಗ್ರಹ ಆಟೋಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ನಾಲ್ಕು ಆಟೋಗಳನ್ನ ನಗರದ ಕಸ ಸಂಗ್ರಹಕ್ಕೆ ಕೊಡುಗೆಯಾಗಿ ವಿತರಿಸಿದರು. 

ಈ ವೇಳೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಒಳಚಂರಡಿ ವ್ಯವಸ್ಥೆಯನ್ನ ಮಾಡಿಕೊಡುವುದ್ದಾಗಿ ಭರವಸೆ ನೀಡಲಾಗಿತ್ತು. ಅದರಂತೆ ನೈರ್ಮಲ್ಯಕ್ಕೆ ಸಂಬಂಧಪಟ್ಟಂತೆ ನಾಲ್ಕು ಆಟೋಗಳನ್ನ ಕೊಡಲಾಗಿದೆ. ಹೊಸಕೋಟೆ ನಗರಕ್ಕೆ ಕಾವೇರಿ ನೀರಿನ ಸಂಪರ್ಕದ ವ್ಯವಸ್ಥೆ ಮಾಡಲಾಗುವುದು, ಈ ಕುರಿತು ಉಪ ಮುಖ್ಯಮಂತ್ರಿಗಳು ಹಾಗೂ ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರ ಜೊತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. 

ಇದನ್ನೂ ಓದಿ:10ನೇ ತರಗತಿ ವರೆಗೆ ಮೊಟ್ಟೆ ನೀಡುವ ಕಾರ್ಯಕ್ರಮ ವಿಸ್ತರಣೆಯಿಂದ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿ: ಸಚಿವ ಮಧು ಬಂಗಾರಪ್ಪ

ABOUT THE AUTHOR

...view details