ಮೃತದೇಹ ಹೊತ್ತುಕೊಂಡು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನದಿ ದಾಟಿ ಗ್ರಾಮಸ್ಥರು..! - ಆಂಬ್ಯುಲೆನ್ಸ್ ಸೇವೆ
ಕೊರಾಪುಟ್ (ಒಡಿಶಾ):ಲಕ್ಷ್ಮೀಪುರ ಬ್ಲಾಕ್‌ನ ಇನ್ನರ್‌ಗಢ ಪಂಚಾಯತ್‌ನ ಚಾರ್ಡಾ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ವ್ಯಕ್ತಿಯ ಮೃತದೇಹವನ್ನು ಹೊತ್ತಕೊಂಡು ಗ್ರಾಮಸ್ಥರು ನದಿಯನ್ನು ದಾಟಿದ ಭಯಾನಕ ಘಟನೆ ನಡೆದಿದೆ. ಹೌದು, ಗ್ರಾಮಸ್ಥರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ. ಗ್ರಾಮದ ಎಲ್ಲರೂ ಕೈಕೈ ಹಿಡಿದುಕೊಂಡು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ ನದಿಯನ್ನು ದಾಟಿದ್ದಾರೆ.
ಮಾಹಿತಿ ಪ್ರಕಾರ, ಈ ಚಿರಸ್ರೋಟ ನದಿಗೆ ಸೇತುವೆ ಇಲ್ಲದ ಕಾರಣಕ್ಕೆ ಗ್ರಾಮಸ್ಥರು ನದಿ ದಾಟುವ ಅಪಾಯಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುವುದು ಅನಿವಾರ್ಯವಾಗಿದೆ. ಸ್ಮಶಾನಕ್ಕೆ ಹೋಗಲು, ನದಿ ದಾಟಬೇಕು. ಈ ಸಮಸ್ಯೆ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ಗ್ರಾಮದಲ್ಲಿ ಸುಮಾರು 400 ಕುಟುಂಬಗಳು ವಾಸವಿದ್ದು, ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದೆ.
ಮಳೆಗಾಲದಲ್ಲಿ ಬೆಟ್ಟದ ಮೇಲಿನಿಂದ ಮಳೆಯ ನೀರು ರಭಸವಾಗಿ ಕೆಳ ಭಾಗಕ್ಕೆ ಹರಿಯುತ್ತದೆ. ಇದರಿಂದ ಗ್ರಾಮಸ್ಥರು ಆಂಬ್ಯುಲೆನ್ಸ್ ಸೇವೆಯಿಂದ ವಂಚಿತರಾಗಿದ್ದಾರೆ. ಬೇರೆ ಗ್ರಾಮಗಳನ್ನು ಸಂಪರ್ಕಿಸುವುದು ಇಲ್ಲಿನ ಜನರಿಗೆ ತೀವ್ರ ಸಂಕಷ್ಟದ ಸಂಗತಿಯಾಗಿದೆ. ಗ್ರಾಮಸ್ಥರು ಮೃತದೇಹವನ್ನು ಅಪಾಯಕಾರಿ ಸ್ಥಿತಿಯಲ್ಲಿ ಹೊತ್ತೊಯ್ಯುತ್ತಿರುವ ದೃಶ್ಯ ಮನಕಲಕುವಂತೆ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಂದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಗಡ್ಡದನಾಯಕನಹಳ್ಳಿ ಗ್ರಾಮಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಬಸ್ ಸಂಚಾರ ವ್ಯವಸ್ಥೆ