ಗಡಿ ಜಿಲ್ಲೆಯಲ್ಲಿ ಸಂಕ್ರಾಂತಿ ಆಚರಣೆ: ಗಾಳಿಪಟ ಹಾರಿಸಿ ಸಂಭ್ರಮಿಸಿದ ಹುಮನಾಬಾದ್ ಜನ - ವಿಧಾನ ಪರಿಷತ್ ಸದಸ್ಯ
ರಾಜ್ಯದೆಲ್ಲೆಡೆ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಗಡಿಜಿಲ್ಲೆ ಬೀದರ್ನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿ ಸಂಭ್ರಮಿಸಿದರು. ವಿಶೇಷವಾಗಿ ಹುಮನಾಬಾದ್ ಪಟ್ಟಣದಲ್ಲಿ ದಿನವಿಡೀ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಗಾಳಿಪಟ ಹಾರಿಸಿ ಸಂಕ್ರಾಂತಿ ಆಚರಿಸಿದರು. ಸಹೋದರರಾದ ಶಾಸಕ ರಾಜಶೇಖರ ಬಿ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಬಿ. ಪಾಟೀಲ್, ಭೀಮರಾವ್ ಬಿ. ಪಾಟೀಲ್ ಅವರು ಸಹ ಗಾಳಿಪಟ ಹಾರಿಸಿ ಯುವಕರಿಗೆ ಉತ್ಸಾಹ ತುಂಬಿದರು. ಸ್ಥಳೀಯ ಸಂಘಸಂಸ್ಥೆಗಳ ಸದಸ್ಯರು ಗ್ರಾಮದ ಜನರಿಗೆ ಎಳ್ಳು ಬೆಲ್ಲ ಹಂಚಿದರು. ಈ ಊರಿನಲ್ಲಿ ಹಲವು ವರ್ಷಗಳಿಂದ ಗಾಳಿಪಟ ಹಾರಿಸುವ ಸಂಪ್ರದಾಯ ಹಬ್ಬದಂತೆಯೇ ನಡೆದುಕೊಂಡು ಬರುತ್ತಿದೆ.
ಇದನ್ನೂ ನೋಡಿ:ಮಕರ ಸಂಕ್ರಾಂತಿ ದಿನ ಅವಘಡ: ಒಂದೇ ಕುಟುಂಬದ ನಾಲ್ವರು ನೀರುಪಾಲು, ಕಾಲ್ತುಳಿತಕ್ಕೆ ಓರ್ವ ಮಹಿಳೆ ಸಾವು