ಕರ್ನಾಟಕ

karnataka

ಕೆಂಡಸಂಪಿಗೆ ನಟ ವಿಕ್ಕಿ ಮತದಾನ

ETV Bharat / videos

ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದು ಮೊದಲ ವೋಟ್ ಮಾಡಿದ 'ಕೆಂಡಸಂಪಿಗೆ' ನಟ ವಿಕ್ಕಿ - ಕೆಂಡಸಂಪಿಗೆ ನಟ ವಿಕ್ಕಿ

By

Published : May 10, 2023, 8:23 AM IST

ಚಾಮರಾಜನಗರ: ಸ್ಯಾಂಡಲ್​ವುಡ್ ನಟ, ಕೆಂಡಸಂಪಿಗೆ ಸಿನಿಮಾ ಖ್ಯಾತಿಯ ವಿಕ್ಕಿ ಅವರಿಂದು ತಮ್ಮ ಸ್ವಗ್ರಾಮದಲ್ಲಿ ಮೊದಲ ಮತ ಚಲಾಯಿಸಿದರು. ಗಡಿಜಿಲ್ಲೆ ಚಾಮರಾಜನಗರಾದ್ಯಂತ ಮತದಾನ ನಡೆಯುತ್ತಿದೆ. ಮತಗಟ್ಟೆಗೆ ರಾಜಕೀಯ ನಾಯಕರು ಸೇರಿದಂತೆ ಸಾರ್ವಜನಿಕರು ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. 

ತಮ್ಮ ಗ್ರಾಮದಲ್ಲಿ ನಟ ವಿಕ್ಕಿ ಮೊದಲ ಮತದಾನ ಮಾಡಿದರು. ವೋಟಿಂಗ್‌ಗಾಗಿ ನಟ ಬೆಂಗಳೂರಿನಿಂದ ಚಾಮರಾಜನಗರ ತಾಲೂಕಿನ ಮೂಡ್ಲುಪುರ ಗ್ರಾಮಕ್ಕೆ ಆಗಮಿಸಿದ್ದಾರೆ. ಈ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಿದರು. 

ವೋಟ್‌ ಮಾಡಿದ ಬಳಿಕ ಮಾಧ್ಯಮಗಳಿಗೆ ಮಾತನಾಡಿರುವ ಅವರು, "ಗ್ರಾಮದಲ್ಲಿ ನಾನೇ ಮೊದಲ ಮತ ಚಲಾಯಿಸಬೇಕು ಎಂಬ ಉದ್ದೇಶದಿಂದ ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ್ದೇನೆ. ಸಮರ್ಥ ನಾಯಕನಿಗೆ ಮತ ನೀಡಬೇಕು. ಅದೇ ರೀತಿ ಪ್ರತಿಯೊಬ್ಬರೂ ತಮ್ಮ ಅಮೂಲ್ಯ ಮತವನ್ನು ಚಲಾವಣೆ ಮಾಡಬೇಕು" ಎಂದು ಮನವಿ ಮಾಡಿದರು. ಈಗಾಗಲೇ ಮತದಾನ ಆರಂಭವಾಗಿದೆ. ಅನೇಕರು ತಮ್ಮ ಮತ ಚಲಾಯಿಸುತ್ತಿದ್ದಾರೆ. ಯಾರೊಬ್ಬರೂ ಮತದಾನದಿಂದ ಹಿಂದೆ ಸರಿಯಬಾರದು ಎಂದು ಹೇಳಿದರು.

ಇದನ್ನೂ ಓದಿ:ಮೇ 10 ಓಟು ಒತ್ತು, ಮತದಾರರನ್ನು ಗೆಲ್ಲಿಸುವ ಅಭ್ಯರ್ಥಿಯನ್ನು ಆರಿಸಿ: ಹಾಸ್ಯನಟ ಧರ್ಮಣ್ಣ

ABOUT THE AUTHOR

...view details