ಕರ್ನಾಟಕ

karnataka

ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸಿದ ಸಂದಲ್ ಮಿರ್ವಾನುಕಿ ಸಮುದಾಯ

ETV Bharat / videos

ತ್ರಯಂಬಕೇಶ್ವರ ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸಿದ ಸಂದಲ್ ಮಿರ್ವಾನುಕಿ ಸಮುದಾಯ: ತನಿಖೆಗೆ ಆದೇಶಿಸಿದ ಫಡ್ನವೀಸ್​

By

Published : May 16, 2023, 6:25 PM IST

ನಾಸಿಕ್ (ಮಹಾರಾಷ್ಟ್ರ):ಮಹಾರಾಷ್ಟ್ರದ ಥಾಣೆಯಲ್ಲಿರುವ ದೇವಾಲಯದ ಶಿಷ್ಟಾಚಾರಕ್ಕೆ ವಿರುದ್ಧವಾಗಿ ಸಂದಲ್​ ಮಿರ್ವಾನುಕಿ ಸಮುದಾಯದ ಗುಂಪು ತ್ರಯಂಬಕೇಶ್ವರ ದೇವಸ್ಥಾನದ ಆವರಣಕ್ಕೆ ಪ್ರವೇಶಿಸಿದ್ದು, ಅವರನ್ನು ಭದ್ರತಾ ಸಿಬ್ಬಂದಿ ಹಾಗೂ ಎಂಎಸ್​ಎಫ್​ ಜವಾನರು ಅವರನ್ನು ಒಳಹೋಗದಂತೆ ತಡೆದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ನಾಸಿಕ್​ನಲ್ಲಿ ವಿವಾದ ಭುಗಿಲೆದ್ದಿದೆ.

ಸಂದಲ್ ಮಿರ್ವಾನುಕಿ ಸಮುದಾಯದ 10 ರಿಂದ 15 ಜನರ ಗುಂಪು ಫುಲಾಂಚಿ ಚಾದರ್ (ಧಾರ್ಮಿಕ ನೈವೇದ್ಯವಾಗಿ ಹೂವಿನಿಂದ ಅಲಂಕರಿಸಿದ ಕಂಬಳಿ) ತೆಗೆದುಕೊಂಡು ಉತ್ತರ ಮಹಾದ್ವಾರದ ಮುಂಭಾಗದಲ್ಲಿರುವ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಪ್ರವೇಶಿಸಲು ಪ್ರಯತ್ನಿಸಿದೆ ಎಂದು ಮೂಲಗಳು ತಿಳಿಸಿವೆ. ಆಪಾದಿತ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

ಕೆಲವೇ ಸೆಕೆಂಡುಗಳ ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ತನ್ನ ತಲೆಯ ಮೇಲೆ ಹೂವಿನಿಂದ ಅಲಂಕರಿಸಲ್ಪಟ್ಟ ಕಂಬಳಿಯನ್ನು, ಬುಟ್ಟಿಯನ್ನು ಹೊತ್ತುಕೊಂಡು ದೇವಾಲಯದೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಾನೆ. ದೇವಸ್ಥಾನ ಟ್ರಸ್ಟ್‌ನ ಭದ್ರತಾ ಸಿಬ್ಬಂದಿ ಮತ್ತು ಎಂಎಸ್‌ಎಫ್ ಜವಾನರು ಸ್ಯಾಂಡಲ್ ಮಿರ್ವಾನುಕಿ ಸಮುದಾಯದ ಸದಸ್ಯರನ್ನು ಒಳಗೆ ಪ್ರವೇಶಿಸದಂತೆ ತಡೆದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗೃಹ ಸಚಿವವರೂ ಆಗಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.

ಪೊಲೀಸ್ ಆಡಳಿತವು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಸಂತ ಸಮಿತಿ ಮುಖ್ಯಸ್ಥ ಮಹಂತ್ ಅನಿಕೇತ್ ಶಾಸ್ತ್ರಿ ದೇಶಪಾಂಡೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:'ಕೀರ್ತಿ ಚಕ್ರ' ಹುತಾತ್ಮ ಯೋಧ ಶ್ರವಣ ಕಶ್ಯಪ್ ಪತಿಮೆ ನಿರ್ಮಿಸಿ ಪೂಜೆ: ವಿಡಿಯೋ

ABOUT THE AUTHOR

...view details