ಸಾವಿರಾರು ಮಣ್ಣಿನ ಟೀ ಕಪ್ಗಳಲ್ಲಿ ಅರಳಿತು ಮೋದಿಯ ಮರಳು ಕಲಾಕೃತಿ.. - ಪ್ರಧಾನಿ ನರೇಂದ್ರ ಮೋದಿ ಅವರ 72 ನೇ ಜನ್ಮದಿನ
ಒಡಿಶಾದ ಪುರಿಯಲ್ಲಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ 72 ನೇ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಇಲ್ಲಿನ ಕಡಲತೀರದಲ್ಲಿ 1,213 ಮಣ್ಣಿನ ಟೀ ಕಪ್ಗಳನ್ನು ಅಳವಡಿಸಿ ಪಿಎಂ ಮೋದಿ ಅವರ ಮರಳು ಕಲಾಕೃತಿ ರಚಿಸಿ ಶುಭಕೋರಿದರು. ಪಟ್ನಾಯಕ್ ಅವರು 1,213 ಮಣ್ಣಿನ ಟೀ ಕಪ್ಗಳನ್ನು ಜೋಡಿಸು ಮೂಲಕ 'ಹ್ಯಾಪಿ ಬರ್ತ್ಡೇ ಮೋದಿ ಜಿ' ಎಂಬ ಸಂದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ 5 ಅಡಿ ಎತ್ತರದ ಮರಳಿನ ಶಿಲ್ಪವನ್ನು ರಚಿಸಿದ್ದಾರೆ. ಈ ಕಲಾಕೃತಿ ರಚಿಸುವುದಕ್ಕೆ ಅವರು ಸುಮಾರು 5 ಟನ್ ಮರಳನ್ನು ಬಳಸಿದ್ದಾರೆ. ಪಟ್ನಾಯಕ್ ಅವರು ಸಾಮಾನ್ಯವಾಗಿ ಪ್ರಧಾನಿಯವರ ಜನ್ಮದಿನದಂದು ಶುಭ ಹಾರೈಸಲು ವಿಶಿಷ್ಟವಾದ ಮರಳಿನ ಶಿಲ್ಪಗಳನ್ನು ರಚಿಸುತ್ತಾರೆ.
Last Updated : Feb 3, 2023, 8:28 PM IST