ಕರ್ನಾಟಕ

karnataka

ಶಬರಿಮಲೆ ಮಕರಜ್ಯೋತಿ ದರ್ಶನ

ETV Bharat / videos

ಶಬರಿಮಲೆ ಮಕರಜ್ಯೋತಿ ದರ್ಶನ: ಭಕ್ತಿ ಪರವಶರಾದ ಅಯ್ಯಪ್ಪ ಭಕ್ತರು

By ETV Bharat Karnataka Team

Published : Jan 15, 2024, 8:54 PM IST

Updated : Jan 15, 2024, 9:04 PM IST

ಶಬರಿಮಲೆ (ಕೇರಳ): ಸುಪ್ರಸಿದ್ಧ ಪುಣ್ಯಕ್ಷೇತ್ರವಾದ ಶಬರಿಮಲೆಯಲ್ಲಿ ಇಂದು ಅಯ್ಯಪ್ಪ ಸ್ವಾಮಿಯ ಮಕರಜ್ಯೋತಿ (Makarajyoti) ದರ್ಶನವಾಗಿದ್ದು ಅಪಾರ ಸಂಖ್ಯೆಯ ಭಕ್ತರು ದರ್ಶನ ಪಡೆದರು. ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಜ್ಯೋತಿ ಗೋಚರವಾಗುತ್ತದೆ. ಇದಕ್ಕಾಗಿ ಲಕ್ಷಾಂತರ ಭಕ್ತರು ಶಬರಿಮಲೆ (Shabarimale) ಕ್ಷೇತ್ರಕ್ಕೆ ಆಗಮಿಸುತ್ತಾರೆ. ಇಂದು ಸಂಜೆ 6 ಗಂಟೆ ಸುಮಾರಿಗೆ ಪೊನ್ನಂಬಲಮೇಡು ಪರ್ವತದಲ್ಲಿ ಮಕರಜ್ಯೋತಿ ದರ್ಶನವಾಗಿದೆ. ಜ್ಯೋತಿ ಕಾಣಿಸಿಕೊಳ್ಳುತ್ತಿದ್ದಂತೆ ಭಕ್ತಿ ಪರವಶರಾದ  ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಘೋಷಣೆ ಕೂಗಿದರು. 

ಅಯ್ಯಪ್ಪ ಸ್ವಾಮಿಯೇ ಮಕರ ಜ್ಯೋತಿಯ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬುದು ಭಕ್ತರ ನಂಬಿಕೆ. ಇದರಿಂದಾಗಿ ಪ್ರತಿ ವರ್ಷ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ. ಪಂಬಾ, ಸನ್ನಿಧಾನಂ, ಪುಲಿಮೆಡೆ ಮತ್ತು ನೀಲಿಕಲ್ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರ ಮಕರಜ್ಯೋತಿಯ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಅಯ್ಯಪ್ಪನ ನಾಮಸ್ಮರಣೆಯಿಂದ ಇಡೀ ಶಬರಿಮಲೆ ಪುಳಕಿತವಾಯಿತು. ಜ್ಯೋತಿ ದರ್ಶನದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಇದನ್ನೂ ಓದಿ:ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಿದ ಸೂರ್ಯ ರಶ್ಮಿ: ಕೌತುಕ ಕಣ್ತುಂಬಿಕೊಂಡ ಅಸಂಖ್ಯ ಭಕ್ತರು

Last Updated : Jan 15, 2024, 9:04 PM IST

ABOUT THE AUTHOR

...view details