ಕರ್ನಾಟಕ

karnataka

ETV Bharat / videos

ಗುಮ್ಮಟನಗರಿಯಲ್ಲಿ‌ ಆರ್​ಎಸ್​ಎಸ್ ಆಕರ್ಷಕ‌ ಪಥಸಂಚಲನ - ವಿಜಯಪುರ ನಗರ ಸಂಪೂರ್ಣ ಕೇಸರಿಮಯ

By

Published : Nov 6, 2022, 7:08 PM IST

Updated : Feb 3, 2023, 8:31 PM IST

ವಿಜಯಪುರ: ವಿಜಯಪುರ ನಗರದಲ್ಲಿಂದು ಆರ್​ಎಸ್​ಎಸ್​ ಪಥ ಸಂಚಲನ ನಡೆಯಿತು. ನಗರದ ಸ್ಯಾಟಲೈಟ್ ಬಸ್ ನಿಲ್ದಾಣ ಬಳಿಯಿಂದ ಆರಂಭವಾಗಿ ಸಾಗಿದ ಪಥ ಸಂಚಲನದಲ್ಲಿ ಗಣವೇಷಧಾರಿಗಳು ಡ್ರಮ್ ಬಾರಿಸುತ್ತಾ ಗೋದಾವರಿ ಹೋಟೆಲ್​, ಡೋಬಲೆ ಗಲ್ಲಿ, ಉಪ್ಪಲಿ ಬುರ್ಜ್, ಸರಾಫ್ ಬಜಾರ್, ರಜಪೂತ ಓಣಿ, ನಾಗೂರ ಕಾಲೇಜ್‌ವರೆಗೂ ಸಾಗಿದರು.‌ ದಾರಿಯ ಇಕ್ಕೆಲಗಳಲ್ಲಿ ನಿಂತ ಸಾರ್ವಜನಿಕರು ಪುಷ್ಪವೃಷ್ಠಿ ಮಾಡಿದರು. ವಂದೇ ಮಾತರಂ, ಭಾರತ್​ ಮಾತಾ ಕಿ ಜೈ ಎಂಬ ಘೋಷಣೆಗಳು ಮೊಳಗಿದವು. ಪಥ ಸಂಚಲನ ಸಾಗುವ ಮಾರ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಅಂತಿಮವಾಗಿ, ನಾಗೂರು‌‌ ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಿತು.
Last Updated : Feb 3, 2023, 8:31 PM IST

ABOUT THE AUTHOR

...view details