ಕರ್ನಾಟಕ

karnataka

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನ

ETV Bharat / videos

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನ.. ಕಾಲು ಜಾರಿ ಬಿದ್ದ ಪ್ರಯಾಣಿಕ.. ಪ್ರಾಣ ಉಳಿಸಿದ ಪೊಲೀಸ್​ - ETV Bharath Kannada news

By

Published : Feb 20, 2023, 9:17 AM IST

Updated : Feb 20, 2023, 10:55 AM IST

ಬೆರ್ಹಾಂಪುರ (ಒಡಿಶಾ):ಚಲಿಸುತ್ತಿರುವ ರೈಲಿನಿಂದ ಪ್ರಯಾಣಿಕ ಇಳಿಯಲೆತ್ನಿಸಿದ್ದು, ನಿಯಂತ್ರಣ ತಪ್ಪಿ ಕಳೆಗೆ ಬಿದ್ದಿದ್ದಾರೆ. ಈ ವೇಳೆ, ಅಲ್ಲೇ ಇದ್ದ ರೈಲ್ವೆ ಪೊಲೀಸ್​ ಕೂಡಲೇ ರಕ್ಷಿಸಿದ್ದಾರೆ ಇದರಿಂದ ಪ್ರಯಾಣಿಕನ ಪ್ರಾಣ ಉಳಿದಿದೆ. ಈ ಘಟನೆ ರೈಲ್ವೆ ಸ್ಟೇಷನ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕರ್ತವ್ಯ ನಿರತರಾಗಿದ್ದ ಆರ್‌ಪಿಎಫ್ ಕಾನ್ಸ್​ಟೇಬಲ್​​​​​​ ಸೂರ್ಯಕಾಂತ್ ಸಾಹು ಅವರ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.    

ವಿಡಿಯೋದಲ್ಲಿ, ಪ್ಯಾಸೆಂಜರ್ ರೈಲು ಬರುತ್ತಿದ್ದಂತೆ ಆರ್‌ಪಿಎಫ್ ನಿಲ್ದಾಣದಲ್ಲಿ ನಿಂತಿರುವುದು ಕಂಡು ಬರುತ್ತದೆ. ಇದೇ ವೇಳೆ ಯುವಕನೊಬ್ಬ ಚಲಿಸುತ್ತಿದ್ದ ರೈಲಿನಿಂದ ಹೊರಬರಲು ಯತ್ನಿಸಿ ಕೆಳಗೆ ಬಿದ್ದಿದ್ದಾರೆ. ಆಗ ಆರ್‌ಪಿಎಫ್ ಯೋಧ ಕೂಡಲೇ ಅವರನ್ನು ರಕ್ಷಿಸಿರುವುದು ಕಂಡು ಬರುತ್ತದೆ. ರಕ್ಷಿಸಲ್ಪಟ್ಟ ಯುವಕ ಅಸ್ಸೋಂ ಮೂಲದ 34 ವರ್ಷದ ಜಯಶ್ ಮುಂಡಾ ಎಂದು ತಿಳಿದು ಬಂದಿದೆ. 

ಇದನ್ನೂ ಓದಿ:ರೈತರಿಗೆ ಪಿಂಚಣಿ, ನಿವೃತ್ತಿ ಅವಧಿ ನಿಗದಿಗೆ ಸಂಸದ ಡಿ ಕೆ ಸುರೇಶ್​ ಒತ್ತಾಯ

Last Updated : Feb 20, 2023, 10:55 AM IST

ABOUT THE AUTHOR

...view details