Watch.. ಹುಲಿ ಬಂತು ಹುಲಿ... ಒಡಿಶಾ - ಆಂಧ್ರ ಗಡಿಯಲ್ಲಿ ರಾಯಲ್ ಬೆಂಗಾಲ್ ಟೈಗರ್ ಘರ್ಜನೆ - ರಾಯಲ್ ಬೆಂಗಾಲ್
Published : Aug 22, 2023, 1:58 PM IST
ರಾಯಗಡ(ಒಡಿಶಾ): ಆಂಧ್ರ-ಒಡಿಶಾ ರಾಜ್ಯ ಗಡಿಯಲ್ಲಿ ರಾಯಲ್ ಬೆಂಗಾಲ್ ಹುಲಿ ಸಿಕ್ಕಿದಲ್ಲೆಲ್ಲಾ ಓಡಾಡುತ್ತಿದ್ದು, ಹುಲಿಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶ್ರೀಕಾಕುಳಂ ಜಿಲ್ಲೆಯ ಆಂಧ್ರ ವಾಮಿನಿ ಮಂಡಲ, ರಾಯಗಡ ಜಿಲ್ಲೆಯ ಗುನ್‌ಪುರ್ ಹತ್ತಿರ ಒಡಿಶಾ ಗಡಿಯಲ್ಲಿ ರಾಯಲ್ ಬೆಂಗಾಲ್ ಟೈಗರ್ ಒಡಾಡುತ್ತಿರುವ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ರಾಯಲ್ ಹುಲಿಯ ದರ್ಶನದಿಂದ ಎರಡೂ ರಾಜ್ಯಗಳ ಗಡಿ ಗ್ರಾಮಗಳಲ್ಲಿ ಭಯದ ವಾತವರಣ ಉಂಟಾಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಾಯಲ್ ಬೆಂಗಾಲ್ ಟೈಗರ್ ರಸ್ತೆ ದಾಟುತ್ತಿರುವುದು ಕಾಡಿನ ಮಧ್ಯೆ ಘರ್ಜಿಸುತ್ತಾ ಓಡಾಡುವುದು, ಪೊದೆಯಲ್ಲಿ ಇರುವುದು ಗಮನಿಸಬಹುದು. ಹುಲಿಯ ವಿಚಾರ ತಿಳಿಯುತ್ತಿದ್ದಂತೆಯೆ ಶ್ರೀಕಾಕುಳಂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಲಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದರು.
ಹುಲಿಯ ಓಡಾಟದ ಬಗ್ಗೆ ಗ್ರಾಮಸ್ಥರು ಮಾತ್ರ ಕಂಡಿಲ್ಲ ಎಂದಿದ್ದಾರೆ. ಆದರೆ ಕೆಲವೆಡೆ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ ಎಂದು ಭಾಮಿನಿ ಮಂಡಲದ ಅರಣ್ಯಾಧಿಕಾರಿ ರಾಮರಾವ್ ತಿಳಿಸಿದ್ದಾರೆ. ಜೊತೆಗೆ ಸ್ಥಳೀಯ ತಹಶೀಲ್ದಾರ್ ಅರಣ್ಯ ಪ್ರದೇಶಕ್ಕೆ ಯಾರು ತೆರಳದಂತೆ, ಸಾಕು ಪ್ರಾಣಿಯನ್ನು ಬಿಡದಂತೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಗುಣಾಪುರ ಉಪ ರಕ್ಷಕ ನಿಲ್ ಮಾಧವ್ ಪಾಧಿ ಮಾತನಾಡಿ, ಆಂಧ್ರದಲ್ಲಿ ಹುಲಿಯ ಓಡಾಟದ ದೃಶ್ಯಗಳು ವೈರಲ್ ಆಗುತ್ತಿವೆ. ಒಡಿಶಾದಲ್ಲಿ ಯಾವುದೇ ಅಪಾಯವಿಲ್ಲ. ಹಾಗೆ ಗಡಿ ಭಾಗದಲ್ಲಿ ಪ್ರತಿದಿನ ತಪಾಸಣೆ ನಡೆಸಲಾಗುತ್ತಿದೆ. ಈ ಕುರಿತು ಉಪ ರೇಂಜರ್ ಆಂಧ್ರ ಅಧಿಕಾರಿಯನ್ನು ಸಂಪರ್ಕಿಸಲಾಗಿದೆ ಮತ್ತು ಅಗತ್ಯ ಕ್ರಮಗಳನ್ನು ತೆಗದುಕೊಳ್ಳಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಯುವಕರ ಬೈಕ್ನತ್ತ ನುಗ್ಗಿದ ಕಾಡಾನೆ.. ಗಜರಾಜನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಕರ್ನಾಟಕದ ನಿವಾಸಿಗಳು!!