ಜೈಲಿನಲ್ಲಿರುವ ಧರಣಿ ನಿರತ ಸಹೋದ್ಯೋಗಿಗಳನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದ ರೋಹಿಂಗ್ಯಾ ನಿರಾಶ್ರಿತರು
ಜಮ್ಮು ಮತ್ತು ಕಾಶ್ಮೀರ: ಹೀರಾನಗರ ಜೈಲಿನಲ್ಲಿ ರೋಹಿಂಗ್ಯಾ ನಿರಾಶ್ರಿತರ ಹೋರಾಟ ಬೆಂಬಲಿಸಿ ಜಮ್ಮುವಿನಲ್ಲಿ ರೋಹಿಂಗ್ಯಾ ನಿರಾಶ್ರಿತರು ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದ್ದು, ಘರ್ಷಣೆಯ ಸಮಯದಲ್ಲಿ ಕನಿಷ್ಠ ಎಂಟು ಕೈದಿಗಳು ಗಾಯಗೊಂಡಿದ್ದಾರೆ ಎಂದು ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಆದಾಗ್ಯೂ, ಬೆಳಗ್ಗೆ ಹೆಚ್ಚುವರಿ ಪಡೆಗಳು ಸ್ಥಳಕ್ಕೆ ಧಾವಿಸಿ ನಂತರ ಪರಿಸ್ಥಿತಿಯನ್ನು ಹತೋಟಿಗೆ ತಂದಿವೆ.
"ಅವರನ್ನು ಏಕೆ ಬಂಧಿಸಲಾಗಿದೆ ಎಂದು ನಮಗೆ ಅರ್ಥವಾಗುತ್ತಿಲ್ಲ. ಅವರು ಯಾವುದೇ ಹಾನಿ ಅಥವಾ ಅಪರಾಧವನ್ನು ಮಾಡಿಲ್ಲ. ಹಾಗೂ ನಮ್ಮನ್ನ ಅತ್ಯಂತ ಕೆಟ್ಟ ರೀತಿ ಶಿಕ್ಷಿಸಲಾಗುತ್ತಿದೆ ಎಂದು ರೋಹಿಂಗ್ಯಾ ಮಹಿಳೆಯರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಜಮ್ಮುವಿನ ಕಥುವಾ ಜಿಲ್ಲೆಯ ಸುಮಾರು 270 ರೊಹಿಂಗ್ಯಾಗಳನ್ನು ಬಿಡುಗಡೆ ಮಾಡುವಂತೆ ಸಮುದಾಯದ ಸದಸ್ಯರು ಕರೆ ನೀಡಿದ್ದರು. ಕೈದಿಗಳ ಬಂಧನದ ವಿರುದ್ಧ ಹಲವಾರು ಪ್ರತಿಭಟನೆಗಳನ್ನು ಸಹ ನಡೆಸಿದರು. ತಮ್ಮ ದುಃಸ್ಥಿತಿಯನ್ನು ಪರಿಗಣಿಸಿ ಅಧಿಕಾರಿಗಳು ನಮ್ಮನ್ನು ಬಿಡುಗಡೆ ಮಾಡಬೇಕು ಎಂದು ಅವೆರಲ್ಲ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ರೋಹಿಂಗ್ಯಾಗಳ ವಾಸಸ್ಥಳವೇ ಬಂಧನ ಕೇಂದ್ರ: ಕೇಜ್ರಿವಾಲ್ ಸರ್ಕಾರಕ್ಕೆ ಗೃಹ ಸಚಿವಾಲಯ ಸೂಚನೆ