ಕರ್ನಾಟಕ

karnataka

ಬಂಧನ

ETV Bharat / videos

ಸಿನಿಮೀಯ ರೀತಿ ಕಾರು ಅಡ್ಡಗಟ್ಟಿ ₹97 ಲಕ್ಷ ದರೋಡೆ; 8 ಮಂದಿ ಆರೋಪಿಗಳು ಸೆರೆ​ - ಮಹದೇವಪುರ ಠಾಣಾ ಪೊಲೀಸರು

By

Published : Mar 23, 2023, 8:12 AM IST

ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಕ್ಯಾಶ್ ಮ್ಯಾನೇಜ್ಮೆಂಟ್ ಸರ್ವಿಸಸ್ ವ್ಯಾನ್ ಅಡ್ಡಗಟ್ಟಿ 97 ಲಕ್ಷ ರೂಪಾಯಿ ದೋಚಿದ್ದ ಎಂಟು ಮಂದಿ ಆರೋಪಿಗಳನ್ನು ಮಹದೇವಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಜಮಾಲ್, ಮೊಹಮ್ಮದ್ ಶಫಿ, ಕೇರಳ ಮೂಲದ ಸುಜೀಶ್, ಅತುಲ್, ಜಮ್ಮೀರ್, ಶಮೀಲ್, ಶಿಜೀಲ್ ಹಾಗೂ ಶರತ್ ಬಂಧಿತರು.

ವಿವರ: ಮಹದೇವಪುರದ ಸಿಂಗಯ್ಯನಪಾಳ್ಯದಲ್ಲಿ ಕೆಲ‌ವು ದಿನಗಳ ಹಿಂದೆ ಹಣ ಸಂಗ್ರಹಿಸುವ ಸಿಎಂಎಸ್ ಕಾರಿನಲ್ಲಿ ನಾಲ್ವರು ಸಿಬ್ಬಂದಿ 97 ಲಕ್ಷ ರೂ. ತೆಗೆದುಕೊಂಡು ಬರುವಾಗ ಅಡ್ಡಗಟ್ಟಿದ 12 ಮಂದಿ ದರೋಡೆಕೋರರು, ಹಣವಿರುವ ಕಾರಿಗೆ ಮತ್ತೊಂದು ಕಾರಿನಿಂದ ಡಿಕ್ಕಿ ಹೊಡೆದು ಗಲಾಟೆ ಮಾಡಿದ್ದಾರೆ. ಆ ಬಳಿಕ, ಕಾರಿನ ಗಾಜು ಒಡೆದು ಸಿಬ್ಬಂದಿಗೆ ಪೆಪ್ಪರ್ ಸ್ಪ್ರೇ ಹಾಕಿ ಹಣ ಎಗರಿಸಿ ಪರಾರಿಯಾಗಿದ್ದರು. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೇರಳ ಮೂಲದ ಗ್ಯಾಂಗ್​ ಅನ್ನು ಬಂಧಿಸಿದ್ದಾರೆ.  

ಇದನ್ನೂ ಓದಿ:ಪೊಲೀಸರನ್ನೇ ಅಪಹರಿಸಿ ಹಲ್ಲೆ ಆರೋಪ: ಯೂಟ್ಯೂಬ್ ಪತ್ರಕರ್ತ ಸೇರಿ ಐವರ ಸೆರೆ

ಬಂಧಿತರಿಂದ 37 ಲಕ್ಷ ರೂ. ನಗದು, 45 ಗ್ರಾಂ ಚಿನ್ನ ಹಾಗೂ ನಾಲ್ಕು ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳಾದ ಮೊಹಮ್ಮದ್ ಶಫಿ ಮತ್ತು ಶರತ್ ಹಾಗೂ ಅತುಲ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೇಂದ್ರ ತನಿಖಾ ತಂಡಗಳ ವಿಚಾರಣೆಗೂ ಒಳಗಾಗಿದ್ದರು. ಕೇರಳ ಮತ್ತು ರಾಜ್ಯದ ಹಲವು ಕಡೆಗಳಲ್ಲಿ ದೊಂಬಿ, ಕೊಲೆ ಯತ್ನ, ಸುಲಿಗೆ, ಹಲ್ಲೆ ಪ್ರಕರಣಗಳಲ್ಲಿ ಇವರ ಪಾತ್ರವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details