ಮುಳುಗಡೆಯಾದ ಸೇತುವೆ ಮೇಲೆ ಸಿಲುಕಿದ ಬಸ್; ಪ್ರಾಣಾಪಾಯದಿಂದ ಪಾರದ ಪ್ರಯಾಣಿಕರು - Etv Bharat Kannada
ಹಳ್ದ್ವಾನಿ(ಉತ್ತರಾಖಂಡ್) : ಮುಳುಗಡೆಗೊಂಡ ಸೇತುವೆ ದಾಟುವ ವೇಳೆ ಪ್ರಯಾಣಿಕರಿದ್ದ ಖಾಸಗಿ ಬಸ್ವೊಂದು ಸಿಲುಕಿರುವ ಘಟನೆ ಹಳ್ದ್ವಾನಿ ಜಿಲ್ಲೆಯ ಸಿತಾರ್ಗಂಜ್ ರಸ್ತೆಯ ಚೋರ್ಗಾಲಿಯಲ್ಲಿ ನಡೆದಿದೆ. ಬಸ್ನಲ್ಲಿ ಪ್ರಯಾಣಿಕರಿದ್ದರು, ಮುಳಗಡೆಯಾಗಿರುವ ಸೇತುವೆ ದಾಟಿಸಲು ಚಾಲಕ ಮುಂದಾಗಿದ್ದು, ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ನೀರಿನ ರಭಸಕ್ಕೆ ಬಸ್ ಮುಂದೆ ಹೋಗದೆ ನಡು ಸೇತುವೆಯಲ್ಲಿ ಸಿಲುಕಿದೆ. ಬಳಿಕ ಅಲ್ಲೆ ಇದ್ದಂತಹ ಜನರು ಬಸ್ನ್ನು ಹಿಂದೆ ತಳ್ಳಿ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated : Feb 3, 2023, 8:29 PM IST