ಭಾರಿ ಹಿಮಪಾತ, ಜಾರುತ್ತಿವೆ ಹಿಮಾಚಲದ ರಸ್ತೆಗಳು- ವಿಡಿಯೋ - Atal Tunnel Rohtang
ಕುಲು/ಮನಾಲಿ: ಹಿಮಾಚಲ ಪ್ರದೇಶದಲ್ಲಿ ತಾಪಮಾನದಲ್ಲಿ ತೀವ್ರ ಕುಸಿತವಾಗಿದ್ದು, ಭಾರಿ ಹಿಮಪಾತದಿಂದಾಗಿ ರಾಜ್ಯದಲ್ಲಿ ಜಾರು ರಸ್ತೆಗಳೇ ನಿರ್ಮಾಣವಾಗಿವೆ. ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಅಟಲ್ ಸುರಂಗ ರೋಹ್ಟಾಂಗ್‌ಗೆ ತೀವ್ರ ಹೊಡೆತ ಬಿದ್ದಿದೆ. ರಸ್ತೆಗಳ ಎರಡೂ ತುದಿಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಜಾರುತ್ತಿವೆ. ಹಲವು ವಾಹನಗಳು ಹಿಮಪಾತದ ನಡುವೆ ಸಿಲುಕಿ ದೀರ್ಘ ಸಮಯದವರೆಗೆ ಸಂಚಾರದಟ್ಟಣೆ ಉಂಟಾಗಿತ್ತು. ಹಿಮದಿಂದ ಆವೃತವಾಗಿರುವ ರಸ್ತೆಗಳಿಂದಾಗಿ ವಾಹನಗಳ ಬ್ರೇಕ್ ಹಿಡಿಯುತ್ತಿಲ್ಲ.
ಮಂಗಳವಾರ ಸೋಲಾಂಗ್ ನಾಲಾದಿಂದ ಮುಂಚಿತವಾಗಿ ಪ್ರವಾಸಿ ವಾಹನಗಳನ್ನು ಕಳುಹಿಸಲಾಗಿದೆ. ಆದರೆ ಭಾರಿ ಹಿಮಪಾತದಿಂದಾಗಿ ಈಗ ಅವುಗಳನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಅಟಲ್ ಸುರಂಗದಿಂದ ದೂರ ಉಳಿಯುವಂತೆ ಚಾಲಕರಿಗೆ ಸೂಚಿಸಲಾಗಿದೆ. ಕಳೆದ ಎರಡು ದಿನಗಳಿಂದ ಲಾಹೌಲ್ ಕಣಿವೆಯಲ್ಲಿ ಪ್ರತಿಕೂಲ ವಾತಾವರಣವಿದ್ದು, ಹಿಮಪಾತದಿಂದ ಸಂಚಾರ ವ್ಯವಸ್ಥೆ ನಿರ್ವಹಿಸಲು ಪೊಲೀಸ್ ಸಿಬ್ಬಂದಿಗೆ ಕಷ್ಟವಾಗುತ್ತಿದೆ ಎಂದು ಎಸ್ಪಿ ಲಾಹೌಲ್ ಸ್ಪಿತಿ ಮಾನವ್ ವರ್ಮಾ ತಿಳಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಚಾಲಕರು ತುರ್ತು ಸಂದರ್ಭಗಳಲ್ಲಿ ಮಾತ್ರ ಸಂಚರಿಸುವಂತೆ ಮನವಿ ಮಾಡಲಾಗುತ್ತಿದೆ. ಹಿಮಾಚಲ ಪ್ರದೇಶವು ಉತ್ತರ ಭಾರತದ ರಾಜ್ಯವಾಗಿದ್ದು, ರಮಣೀಯ ಸೌಂದರ್ಯ ಮತ್ತು ಸುಂದರವಾದ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ.
ಇದನ್ನೂ ಓದಿ :ಸಿಕ್ಕಿಂನಲ್ಲಿ ಭಾರಿ ಹಿಮಪಾತ: 6 ಪ್ರವಾಸಿಗರ ಸಾವು, 80ಕ್ಕೂ ಹೆಚ್ಚು ಜನ ಸಿಲುಕಿರುವ ಶಂಕೆ