ಕರ್ನಾಟಕ

karnataka

ಅಪಘಾತಕ್ಕೆ ಒಳಗಾದ ದ್ವಿಚಕ್ರವಾಹನ

ETV Bharat / videos

ರಸ್ತೆ ವಿಭಜಕಕ್ಕೆ ದ್ವಿಚಕ್ರ ವಾಹನ ಡಿಕ್ಕಿ, ಸವಾರ ಸಾವು; ಮೃತನ ಬಳಿ ಎಂಟು ಮೊಬೈಲ್ ಫೋನ್‌ ಪತ್ತೆ - ಸಿಟಿ ಮಾರ್ಕೆಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ

By

Published : Feb 11, 2023, 9:57 AM IST

Updated : Feb 14, 2023, 11:34 AM IST

ಬೆಂಗಳೂರು:ರಸ್ತೆ ವಿಭಜಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಡರಾತ್ರಿ ಸಿಟಿ ಮಾರ್ಕೆಟ್ ಮೇಲ್ಸೇತುವೆಯಲ್ಲಿ ನಡೆದಿದೆ. ಕಬೀರ್ ಪಾಶಾ ಎಂಬುವರು ಸಾವನ್ನಪ್ಪಿದ ಬೈಕ್ ಸವಾರ. ವೇಗವಾಗಿ ಮೇಲ್ಸೇತುವೆ ಮೇಲೆ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ವಿಭಜಕಕ್ಕೆ ಡಿಕ್ಕಿಯಾಗಿದ್ದು, ಪರಿಣಾಮ ಸವಾರ ಕಬೀರ್ ನೆಲಕ್ಕೆ ಬಿದ್ದಿದ್ದಾರೆ. ತಲೆಗೆ ಗಾಯವಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮತ್ತೋರ್ವ ಸವಾರನು ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು, ಮೃತನ ದ್ವಿಚಕ್ರ ವಾಹನದಲ್ಲಿ ಒಟ್ಟು ಎಂಟು ಮೊಬೈಲ್​ಗಳು ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೆಪಿಸಿಸಿ ಕಚೇರಿ ಬಳಿ ಮಹಿಳೆಯೊಬ್ಬರ ಮೊಬೈಲ್ ಫೋನ್ ಕಸಿದು ಎಸ್ಕೇಪ್ ಆಗಿರುವ ಮಾಹಿತಿಯಿದ್ದು ಅದೇ ರೀತಿ ಕೃತ್ಯದಲ್ಲಿದ್ದಾಗಲೇ ಅಪಘಾತ ಸಂಭವಿಸಿ ಆರೋಪಿ ಸಾವನ್ನಪ್ಪಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಸಿಟಿ ಮಾರ್ಕೆಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಕ್ಯಾಂಟರ್​ಗೆ ಬೈಕ್​ ಡಿಕ್ಕಿ: ಯುವಕ, ಯುವತಿ ಸಾವು

Last Updated : Feb 14, 2023, 11:34 AM IST

ABOUT THE AUTHOR

...view details