ವೇಗವಾಗಿ ಚಲಿಸುತ್ತಿದ್ದ ಬೈಕ್ನಿಂದ ಕೆಳಗೆ ಬಿದ್ದ ಸವಾರ: ಕೂದಲೆಳೆ ಅಂತರದಲ್ಲಿ ತಪ್ಪಿದ ಅಪಾಯ.. - ಮಿನಿ ಸಿಸಿಟಿವಿ
Published : Oct 9, 2023, 10:39 AM IST
ಸೂರತ್ (ಗುಜರಾತ್):ರಿಂಗ್ ರೋಡ್ ಬ್ರಿಡ್ಜ್ ಮೇಲೆ ಬೈಕ್ ಚಲಾಯಿಸುತ್ತಿದ್ದ ಯುವಕನೊಬ್ಬನ ಪ್ರಾಣಾಪಾಯದಿಂದ ಪಾರಾಗಿದ್ದು, ಇದರ ಲೈವ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತಮ್ ಗೇಟಿನ ಮೇಲೆ ನಿರ್ಮಿಸಿರುವ ಈ ಸೇತುವೆ ಮೇಲೆ ಬೆಳಿಗ್ಗೆ ಬೈಕ್ ಸವಾರರ ಗುಂಪು ಹೋಗುತ್ತಿತ್ತು. ಆಗ ಬೈಕ್ ಸವಾರರೊಬ್ಬರು ಹಠಾತ್ತನೆ ವೇಗ ಹೆಚ್ಚಿಸಿ ಸೇತುವೆಯ ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಅದೃಷ್ಟವಶಾತ್ ಯುವಕ, ನೆಲದಿಂದ 25 ಅಡಿ ಎತ್ತರದಲ್ಲಿರುವ ಸೇತುವೆಯ ಗೋಡೆ ಮೇಲೆ ಬಿದ್ದಿದ್ದಾನೆ. ಬಳಿಕ ಗೋಡೆಗೆ ಹೊಂದಿಕೊಂಡಿರುವ ರಸ್ತೆಯು ಪಕ್ಕದಲ್ಲಿ ಉರುಳಿ ಬಿದ್ದಿದ್ದಾನೆ. ಈ ವೇಳೆ, ಆತನ ಬೈಕ್ 50 ಮೀಟರ್ ದೂರದಲ್ಲಿ ಹೋಗಿ ಬಿದ್ದಿದೆ. ಆದರೆ, ಅಪಘಾತದ ನಂತರ ಯುವಕ ಮತ್ತೆ ಎದ್ದು ತನ್ನ ಬೈಕ್ ಕಡೆಗೆ ಹೋಗುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯ ದೃಶ್ಯ ಹಿಂದಿನಿಂದ ಬರುತ್ತಿದ್ದ ಕಾರಿನಲ್ಲಿ ಅಳವಡಿಸಲಾಗಿದ್ದ ಮಿನಿ ಸಿಸಿಟಿವಿಯಲ್ಲಿ ದಾಖಲಾಗಿದೆ. ಆದರೆ, ಈ ಬಗ್ಗೆ ಇದುವರೆಗೆ ಪೊಲೀಸ್ ದೂರು ದಾಖಲಾಗಿಲ್ಲ. ಈ ವಿಡಿಯೋ ನೋಡಿದ ನಂತರ ಸೂರತ್ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳಲಿದ್ದ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಇಸ್ರೇಲ್ನಿಂದ ಭಾರತಕ್ಕೆ ಮರಳಿದ ನಟಿ.. ಮುಂಬೈ ಏರ್ಪೋರ್ಟ್ಗೆ ಬಂದಿಳಿದ ನುಶ್ರತ್ ಭರುಚಾ