ರೇವಾ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಟಾಯ್ಲೆಟ್ ಕ್ಲೀನಿಂಗ್ ವಿಡಿಯೋ ವೈರಲ್ - Rewa BJP MP Janardhan Mishra
ಮಧ್ಯಪ್ರದೇಶದ ರೇವಾ ಸಂಸದ ಜನಾರ್ದನ ಮಿಶ್ರಾ ಅವರು ಖತ್ಖಾರಿ ಯುವ ಮಂಡಲದ ಸೇವಾ ಪಖವಾಡದಡಿಯಲ್ಲಿ ನೆಡುತೋಪು ಅಭಿಯಾನ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಸರ್ಕಾರಿ ಶಾಲೆ ತಪಾಸಣೆ ವೇಳೆ ಕೊಳಕಾಗಿರುವುದು ಕಂಡು ಬಂದಿದೆ. ಇದನ್ನು ಕಂಡ ಸಂಸದರು ತಾವೇ ಸ್ವತಃ ಕೈಯಿಂದ ಸ್ವಚ್ಛಗೊಳಿಸಿದ್ದಾರೆ. ಸಂಸದರು ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೋವನ್ನು ತಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ. ಜನಾರ್ದನ್ ಮಿಶ್ರಾ ಈ ಹಿಂದೆ ಹಲವು ಬಾರಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೆಯ ಸಂದೇಶವನ್ನು ನೀಡಿದ್ದಾರೆ. 2014ರಲ್ಲಿ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರನ್ನು ಸ್ವಚ್ಛತೆಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿತ್ತು.
Last Updated : Feb 3, 2023, 8:28 PM IST