ಮೂಡಬಿದಿರೆಯಲ್ಲಿ ಬಾವಿಗೆ ಬಿದ್ದ ಬೃಹತ್ ಚಿರತೆ...ಹರಸಾಹಸ ಪಟ್ಟು ರಕ್ಷಣೆ: ವಿಡಿಯೋ ನೊಡಿ
Published : Nov 6, 2023, 7:13 PM IST
ಮಂಗಳೂರು(ದಕ್ಷಿಣ ಕನ್ನಡ) : ಆಕಸ್ಮಿಕವಾಗಿ ಬಾವಿಗೆ ಬಿದ್ದ ಚಿರತೆಯನ್ನು ಊರವರ ಸಹಕಾರದೊಂದಿಗೆ ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನೆ ಮೂಡುಬಿದಿರೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುರಸಭಾ ವ್ಯಾಪ್ತಿಯ ಮಾರೂರು ಗುತ್ತು ಬಳಿಯ ಎಸ್ಸಿ ಕಾಲನಿಯಲ್ಲಿರುವ ಬಾವಿಯೊಂದಕ್ಕೆ ದೊಡ್ಡ ಗಾತ್ರದ ಚಿರತೆಯೊಂದು ಬೆಳಗಿನ ವೇಳೆ ಆಯಾತಪ್ಪಿ ಬಿದ್ದಿದೆ.
ಈ ಬಗ್ಗೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಅವರ ಮಾರ್ಗದರ್ಶನದೊಂದಿಗೆ ವಲಯಾರಣ್ಯಾಧಿಕಾರಿ ಹೇಮಗಿರಿ ಅಂಗಡಿ ನೇತೃತ್ವದ ತಂಡವು ತಕ್ಷಣ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಬಾವಿಗೆ ಬಲೆ ಹಾಕಿ ಬೋನು ಇಟ್ಟು ಅದರೊಳಗೆ ಚಿರತೆ ಬರುವಂತೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು ನೀರಲ್ಲಿ ಒದ್ದಾಡಿ ಚಿರತೆ ಸುಸ್ತಾಗಿತ್ತು. ಬಳಿಕ ಬೋನಿನ ಒಳಗೆ ಬಂದ ಚಿರತೆಯನ್ನು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಲಾಗಿದೆ. ಇನ್ನು ಇದೇ ಪರಿಸರದಲ್ಲಿ ಎರಡು ಚಿರತೆ ಮರಿಗಳು ಓಡಾಟ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಗಮನಿಸಿದ್ದು, ಈ ಹಿನ್ನೆಲೆಯಲ್ಲಿ ಪರಿಸರದಲ್ಲಿ ಆತಂಕ ಹೆಚ್ಚಿದೆ.
ಇದನ್ನೂ ಓದಿ:ರಾಮನಗರ: ಕನ್ನಸಂದ್ರ ಗ್ರಾಮದಲ್ಲಿ ನಾಯಿ ಹೊತ್ತೊಯ್ದ ಚಿರತೆ- ವಿಡಿಯೋ