ಅರಬ್ಬಿ ಸಮುದ್ರದಲ್ಲಿ ಮುಳುಗುವ ಹಂತದಲ್ಲಿದ್ದ ಬೋಟ್, 7 ಮೀನುಗಾರರ ರಕ್ಷಣೆ: ವಿಡಿಯೋ - rescue of 7 fishermen
Published : Jan 17, 2024, 8:18 PM IST
ಕಾರವಾರ:ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ವೇಳೆ ಬೋಟ್ ಒಡೆದ ಪರಿಣಾಮ ಬೋಟ್ನ ಬಳಗೆ ನೀರು ನುಗ್ಗಿದ ಘಟನೆ ಕಾರವಾರ - ಗೋವಾ ಗಡಿಭಾಗದಲ್ಲಿ ನಡೆದಿದೆ. ಮುಳುಗುವ ಹಂತದಲ್ಲಿದ್ದ ಬೋಟ್ ಅನ್ನು ಮತ್ತು ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಭಾಗಿಯಾಗಿದ್ದ ಗಣೇಶ್ ಮಾತನಾಡಿ, "ಮಂಗಳೂರಿನಿಂದ ಕಳೆದ ಮೂರು ದಿನಗಳ ಹಿಂದೆ ಆಳ ಸಮುದ್ರದಲ್ಲಿ, ಮೀನುಗಾರಿಕೆಗೆ ತೆರಳಿದ್ದ ರಾಯಲ್ ಬ್ಲೂ ಹೆಸರಿನ ಮೀನುಗಾರಿಕಾ ಬೋಟ್ನ ತಳಭಾಗ ಒಡೆದು ಒಳಭಾಗಕ್ಕೆ ನೀರು ನುಗ್ಗಲಾರಂಭಿಸಿತ್ತು. ಬಳಿಕ ಮೀನುಗಾರರು ನೀರನ್ನು ಹೊರ ಹಾಕಲು ಪ್ರಯತ್ನಿಸಿದ್ದರೂ, ಹೆಚ್ಚು ನೀರು ತುಂಬುತ್ತಿದ್ದ ಕಾರಣ ಬೋಟ್ ಮುಳುಗುವ ಹಂತದಲ್ಲಿದ್ದತ್ತು. ತಕ್ಷಣ ಮೀನುಗಾರರು ಮಾಲೀಕರು, ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದರು. ಬಳಿಕ ನಾಲ್ಕೈದು ಬೋಟ್ಗಳು ಮೀನುಗಾರರು ನೆರವಿಗೆ ಧಾವಿಸಿದವು. ಕೊನೆಗೆ ಎರಡು ಬೋಟ್ಗಳಿಗೆ ಮುಳುಗುವ ಹಂತದಲ್ಲಿದ್ದ ಬೋಟ್ ಅನ್ನು ಕಟ್ಟಿಕೊಂಡು ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆ ನೆರವಿನೊಂದಿಗೆ ಕಾರವಾರ ಬಂದರಿಗೆ ಎಳೆದು ತರಲಾಯಿತು. ಬೋಟ್ನಲ್ಲಿದ್ದ ಎಲ್ಲ ಮೀನುಗಾರರು ಸುರಕ್ಷಿತವಾಗಿದ್ದಾರೆ. ಬೋಟ್ ಹಾನಿಯಿಂದ ಲಕ್ಷಾಂತರ ರೂ ನಷ್ಟವಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಹೊನ್ನಾವರದ ಯುವಕನ ಕೈಚಳಕ: 1200 ಚಾಕ್ಪೀಸ್ ಬಳಸಿ ರಾಮ ಮಂದಿರ ಮಾದರಿ ನಿರ್ಮಾಣ!