ಕರ್ನಾಟಕ

karnataka

ಬೋಟ್

ETV Bharat / videos

Video ನೋಡಿ... ಮುಳುಗುತ್ತಿದ್ದ ಬೋಟ್​ನಿಂದ ನಾಲ್ವರು ಮೀನುಗಾರರ ರಕ್ಷಣೆ - ಕಾಸರಕೋಡು ಬಂದರು ಪ್ರದೇಶ

By

Published : Feb 23, 2023, 3:48 PM IST

ಕಾರವಾರ: ತಾಂತ್ರಿಕ ದೋಷದಿಂದ ಮುಳುಗುತ್ತಿದ್ದ ಬೋಟ್​ನಲ್ಲಿದ್ದ​ ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಹೊನ್ನಾವರ ಬಳಿಯ ಸಮುದ್ರ ತೀರದಲ್ಲಿ ನಡೆದಿದೆ. ತಾಲೂಕಿನ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಜೈ ಭಾರತ್ ಆಳಸಮುದ್ರ ಮೀನುಗಾರಿಕಾ ಬೋಟು ಮುಳುಗುವ ಹಂತದಲ್ಲಿತ್ತು. ಈ ವೇಳೆ, ರಕ್ಷಣೆಗಾಗಿ ಇತರ ಬೋಟ್​ಗಳಿಗೆ ಸಂದೇಶ ರವಾನಿಸಿದ್ದು, ಹತ್ತಿರದಲ್ಲಿದ್ದ ಲಲಿತ್ ಎಂಬ ಹೆಸರಿನ ಮೀನುಗಾರಿಕಾ ಬೋಟ್​ ಮುಳುಗುತ್ತಿದ್ದ ಬೋಟ್‌ನಿಂದ ನಾಲ್ವರು ಮೀನುಗಾರರನ್ನ ರಕ್ಷಣೆ ಮಾಡಿದೆ. ಅಷ್ಟೇ ಅಲ್ಲದೆ, ಮುಳುಗುತ್ತಿದ್ದ ಬೋಟ್​ ಅನ್ನು ಕಟ್ಟಿಕೊಂಡು ಹೊನ್ನಾವರದ ಕಾಸರಕೋಡು ಬಂದರಿಗೆ ಎಳೆ ತರಲಾಗಿದೆ.  

ಕಾಸರಕೋಡು ಬಂದರು ಪ್ರದೇಶದಲ್ಲಿ ಸಾಕಷ್ಟು ವರ್ಷಗಳಿಂದ ಹೂಳು ತುಂಬಿಕೊಂಡಿದ್ದು, ಮೀನುಗಾರಿಕೆ ನಡೆಸಿಕೊಂಡು ಬೋಟುಗಳು ಬಂದರಿಗೆ ವಾಪಸ್​​ ಆಗಲು ಪರದಾಡುವಂತಾಗಿದೆ. ಈ ಕುರಿತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮತ್ಸೋದ್ಯಮ ಆಧುನೀಕರಣ: ಕರಾವಳಿಯಲ್ಲಿ ಪ್ರಯೋಜನಕ್ಕೆ ಬಾರದ ಲಾಂಗ್ ಲೈನರ್ ಬೋಟ್​ಗಳು!

ABOUT THE AUTHOR

...view details