ಕರ್ನಾಟಕ

karnataka

ಲಿಕ್ಕರ್ ಅಸೋಸಿಯೇಷನ್

ETV Bharat / videos

ಪೊಲೀಸ್ ಕಮೀಷನರ್​ಗೆ ಲಿಕ್ಕರ್ ಅಸೋಸಿಯೇಷನ್ ಸದಸ್ಯರ ಹೀಗೊಂದು ಮನವಿ! - ಈಟಿವಿ ಭಾರತ್​ ಕನ್ನಡ ನ್ಯೂಸ್​

By

Published : Aug 4, 2023, 9:31 PM IST

ಬೆಂಗಳೂರು :ಎರಡು ಪೆಗ್ ಮದ್ಯಕ್ಕೆ ಸೀಮಿತಗೊಳಿಸಿ ವಾಹನ ಚಾಲನೆಗೆ ಅವಕಾಶ ನೀಡಬೇಕೆಂದು ನಗರ ಪೊಲೀಸ್ ಕಮೀಷನರ್ ಬಿ.‌ದಯಾನಂದ್ ಅವರಿಗೆ ​ಲಿಕ್ಕರ್ ಅಸೋಸಿಯೇಷನ್ ಮನವಿ ಮಾಡಿದೆ. ಇಂದು ಎಫ್​ಕೆಸಿಸಿಐ ಹಮ್ಮಿಕೊಂಡಿದ್ದ ಕಮಿಷನರ್ ಮತ್ತು ಉದ್ಯಮಿಗಳ ಸಂವಾದದಲ್ಲಿ ಕಮೀಷನರ್‌ಗೆ ಸಾರ್ವಜನಿಕವಾಗಿ ಲಿಕ್ಕರ್ ಅಸೋಸಿಯೇಷನ್ ಸದಸ್ಯ ವಾಸನ್ ಎಂಬವರು ಮನವಿ ಸಲ್ಲಿಸಿದರು. ಆದರೆ ಕಮಿಷನರ್ ಈ‌ ಮನವಿಯನ್ನು ನಗುನಗುತ್ತಲೇ ತಳ್ಳಿ ಹಾಕಿದರು‌.

ರಾಜಧಾನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಸಿಟಿ ನೈಟ್ ಲೈಫ್​ಗೂ ಪ್ರಖ್ಯಾತಿ ಪಡೆದಿದೆ. ಸರ್ಕಾರಕ್ಕೆ ವಾಣಿಜ್ಯ ತೆರಿಗೆ ಹೊರತುಪಡಿಸಿ ಅಬಕಾರಿ‌ ಇಲಾಖೆಯಿಂದ‌ ಹೆಚ್ಚು ಆದಾಯ ಬರುತ್ತಿದೆ. ಎಲ್ಲರಿಗೂ ಬೇಕಾಗಿರುವ ಅಬಕಾರಿ ಇಲಾಖೆ ಯಾರಿಗೂ ಬೇಡದಂತಿದೆ. ಮದ್ಯಪ್ರಿಯರು ಸಂಕಷ್ಟದಲ್ಲಿದ್ದು, ಡ್ರಂಕ್ ಅಂಡ್ ಡ್ರೈವ್ ಭಯದಲ್ಲಿ ಮದ್ಯ ಮಾರಾಟ ಸಾಕಷ್ಟು ಕುಂಠಿತವಾಗಿದೆ. ಹಾಗಾಗಿ, ಡ್ರಂಕ್ ಅಂಡ್ ಡ್ರೈವ್​ಗೆ ಇರುವ ಒಂದು ಪೆಗ್ ಲಿಮಿಟ್​ ಅನ್ನು ಎರಡು ಪೆಗ್​ಗೆ ಏರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಲಿಕ್ಕರ್ ಅಸೋಸಿಯೇಷನ್ ಸದಸ್ಯ ವಾಸನ್ ತಿಳಿಸಿದರು. 

ಇದನ್ನೂ ಓದಿ :ನಕಲಿ ಮದ್ಯ ಮಾರಾಟ ಜಾಲ ಪತ್ತೆ: 4 ಲಕ್ಷ ಮೌಲ್ಯದ ಮದ್ಯ ಜಪ್ತಿ, ಇಬ್ಬರ ಬಂಧನ

ABOUT THE AUTHOR

...view details