ಕರ್ನಾಟಕ

karnataka

ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ

ETV Bharat / videos

ಕಾಂಗ್ರೆಸ್ ಗ್ಯಾರಂಟಿ ಜಾರಿಗೊಳಿಸಲು ಅಭಿಯಾನ ಆರಂಭಿಸಿದ ರೇಣುಕಾಚಾರ್ಯ.. - MP Renukacharya

By

Published : May 30, 2023, 9:33 PM IST

ದಾವಣಗೆರೆ:ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೊಳಿಸುವಂತೆ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅಭಿಯಾನ ಆರಂಭಿಸಿದರು. ಪ್ರತಿ ಗ್ರಾಮಕ್ಕೆ ತೆರಳುತ್ತಿರುವ ಎಂಪಿ ರೇಣುಕಾಚಾರ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಜ‌ನರನ್ನು ಸೇರಿಸಿ ಅಭಿಯಾನ‌ ಮಾಡಿದರು. 

ಜಿಲ್ಲೆಯ ಬೇಲಿಮಲ್ಲೂರು ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಂಗ್ರೆಸ್ ಗ್ಯಾರಂಟಿ ಜಾರಿಗೊಳಿಸುವಂತೆ ಗ್ಯಾರಂಟಿ ಕಾರ್ಡ್ ಹಿಡಿದು ಪ್ರದರ್ಶಿಸಿ ಮಹಿಳೆಯರಿಗೆ ಮನವರಿಗೆ ಮಾಡಿಕೊಟ್ಟರು. ಅಭಿಯಾನ ಬಳಿಕ ಮಾತನಾಡಿದ ಅವರು, ''ಒಂದನೇ ತಾರೀಖಿನಿಂದ ಯಾರು ಕರೆಂಟ್ ಬಿಲ್ ಹಾಗೂ ಮಹಿಳೆಯರು ಬಸ್ ಚಾರ್ಜ್ ಕೊಡಬೇಡಿ, ಏನಾದರೂ ಚಾರ್ಜ್ ಕೇಳಿದರೆ ನನಗೆ ಫೋನ್​ ಮಾಡಿ. ಮನೆ ಮನೆಗೆ ತೆರಳಿ ಗ್ಯಾರಂಟಿ ಅಭಿಯಾನ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಅವರ ಬಗ್ಗೆ ಅಪಾರವಾದ ಗೌರವ ಇದೆ. ಡಿಕೆಶಿ- ಸಿದ್ದರಾಮಯ್ಯ ಇಬ್ಬರು ಗ್ಯಾರಂಟಿ ಕಾರ್ಡ್ ಮೇಲೆ ಸಹಿ‌ ಮಾಡಿದ್ದಾರೆ. ಆದ್ದರಿಂದ ಯಾವುದೇ ನಿರ್ಬಂಧನೆ ಇಲ್ಲದೇ ಯೋಜನೆಗಳನ್ನು ಜಾರಿಗೊಳಿಸಿ, ಜೂನ್ ಒಂದರವರೆಗೆ ಕಾದು ನೋಡುತ್ತೇವೆ. ಜಾರಿಗೊಳಿಸದಿದ್ದರೆ ಮತ್ತೆ ಅಭಿಯಾನ ಶುರು ಮಾಡುತ್ತೇವೆ'' ಎಂದರು.

ಪ್ರಿಯಾಂಕ ಖರ್ಗೆ ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ:ಪ್ರಿಯಾಂಕ ಖರ್ಗೆ ಸೂಪರ್ ಸಿಎಂ ರೀತಿ ಮಾಡುತ್ತಿದ್ದಾರೆ. ಅವರ ತಂದೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ಈ ರೀತಿ ಮಾಡುತ್ತಿದ್ದಾರೆ. ಪಠ್ಯ ಪುಸ್ತಕ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದು ಯಾವುದೇ ಕಾರಣಕ್ಕೂ ಆಗೋದಿಲ್ಲ ಎಂದ ಅವರು, ಇನ್ನು ಲಕ್ಷ್ಮಣ ಸವದಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಸಚಿವ ಸ್ಥಾನ ಕೊಡದ ಬಗ್ಗೆ ಪ್ರತಿಕ್ರಿಯೆ ಗೆ ನಿರಾಕರಿಸಿ ನೋ ಕಾಮೆಂಟ್ಸ್ ಎಂದರು.

ಇದನ್ನೂ ಓದಿ:ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸಿ: ಕೃಷಿ ಸಚಿವ ಚಲುವರಾಯಸ್ವಾಮಿ

ABOUT THE AUTHOR

...view details