ಕರ್ನಾಟಕ

karnataka

ರೇಣುಕಾ‌ ಸುಕುಮಾರ್

ETV Bharat / videos

ಹುಬ್ಬಳ್ಳಿ-ಧಾರವಾಡ ಹೊಸ ಪೊಲೀಸ್ ಆಯುಕ್ತರಾಗಿ ರೇಣುಕಾ‌ ಸುಕುಮಾರ್ ಅಧಿಕಾರ ಸ್ವೀಕಾರ - ಈಟಿವಿ ಭಾರತ್​ ಕನ್ನಡ ನ್ಯೂಸ್

By

Published : Aug 10, 2023, 3:46 PM IST

ಹುಬ್ಬಳ್ಳಿ : ಹಿರಿಯ ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ್ ಅವರಿಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೂತನ ಪೊಲೀಸ್ ಕಮಿಷನರ್ ಆಗಿ (ಗುರುವಾರ) ಅಧಿಕಾರ ಸ್ವೀಕರಿಸಿದರು. ಇವರು ಹು-ಧಾ ಪೊಲೀಸ್ ‌ಕಮೀಷನರೇಟ್​ನ ಮೊದಲ ಮಹಿಳಾ ಕಮಿಷನರ್ ಕೂಡಾ ಹೌದು. ಈ ಹಿಂದಿನ ಕಮಿಷನರ್​ ಸಂತೋಷ ಬಾಬು ಅವರಿಂದ ತೆರವಾದ ಸ್ಥಾನಕ್ಕೆ ರೇಣುಕಾ ಸುಕುಮಾರ್‌ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದಕ್ಕೂ ಮುನ್ನ, ಕಮಿಷನರೇಟ್​ನಲ್ಲಿ ಡಿಸಿಪಿ ಆಗಿ ಕಾರ್ಯನಿರ್ವಹಿಸಿದ್ದರು.

ಮಾಧ್ಯಮದೊಂದಿಗೆ ಮಾತನಾಡಿದ ರೇಣುಕಾ ಸುಕುಮಾರ್‌, ಅವಳಿ ನಗರದ ಕಮೀಷನರ್ ಆಗಿ ಬಂದಿರುವುದಕ್ಕೆ ಸಂತಸವಾಗಿದೆ. ಪೊಲೀಸ್ ಇಲಾಖೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಈ ಹಿಂದೆ ಇಲ್ಲಿಯೇ ಡಿಸಿಪಿ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಪೊಲೀಸ್ ಕಮೀಷನರ್ ಆಗಿ ಬಂದಿದ್ದೇನೆ. ಸರ್ಕಾರ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಮಹಿಳಾ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತೇನೆ. ರೌಡಿಗಳ ಹಾವಳಿ ಮಟ್ಟಹಾಕುವುದಾಗಿ ಭರವಸೆ‌ ನೀಡಿದ್ದಾರೆ.      

ಇದನ್ನೂ ಓದಿ :ನೊಂದವರ ಕಣ್ಣೀರು ಒರೆಸುವುದು ನನ್ನ ಗುರಿ: ನೂತನ ಪೊಲೀಸ್ ಆಯುಕ್ತ ಬಿ.ದಯಾನಂದ್​

ABOUT THE AUTHOR

...view details