ಕರ್ನಾಟಕ

karnataka

ಬಿಗಿ ಭದ್ರತೆ ಮಧ್ಯೆಯೇ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಖೇಶ್ ಅಂಬಾನಿ ಕುಟುಂಬ

ETV Bharat / videos

ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇಗುಲದಲ್ಲಿ ಮುಖೇಶ್ ಅಂಬಾನಿ ಕುಟುಂಬದಿಂದ ಪೂಜೆ- ವಿಡಿಯೋ - ಅದ್ಧೂರಿ ಮೆರವಣಿಗೆ

By ETV Bharat Karnataka Team

Published : Sep 25, 2023, 11:08 AM IST

ಮುಂಬೈ (ಮಹಾರಾಷ್ಟ್ರ):ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ತಮ್ಮ ಕುಟುಂಬದೊಂದಿಗೆ ಭಾನುವಾರ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಪತ್ನಿ ನೀತಾ ಅಂಬಾನಿ, ಪುತ್ರಿ ಇಶಾ ಅಂಬಾನಿ, ಪುತ್ರ ಅನಂತ್ ಅಂಬಾನಿ ಮತ್ತು ಮೊಮ್ಮಕ್ಕಳು ಜೊತೆಗಿದ್ದರು.

ಗಣೇಶೋತ್ಸವ ಸೆಪ್ಟೆಂಬರ್ 19 ರಂದು ಆರಂಭವಾಗಿದ್ದು, ಸೆಪ್ಟೆಂಬರ್ 29ರವರೆಗೆ ಮುಂದುವರಿಯುತ್ತದೆ. ಚತುರ್ಥಿ ಪ್ರಾರಂಭದಿಂದ 10 ದಿನಗಳ ನಂತರ ಅದ್ಧೂರಿ ಮೆರವಣಿಗೆಗಳೊಂದಿಗೆ ಗಣೇಶ ಮೂರ್ತಿ ನಿಮಜ್ಜನೆಯೊಂದಿಗೆ ಹಬ್ಬ ಸಂಪನ್ನಗೊಳ್ಳುತ್ತದೆ.

ಇತ್ತೀಚೆಗೆ, ಮುಖೇಶ್ ಮತ್ತು ನೀತಾ ಅಂಬಾನಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಮುಂಬೈ ನಿವಾಸ ಆಂಟಿಲಿಯಾದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭಕ್ಕೆ ಬಾಲಿವುಡ್, ಕ್ರೀಡೆ, ವ್ಯಾಪಾರ ಮತ್ತು ರಾಜಕೀಯ ಕ್ಷೇತ್ರದ ಹೆಸರಾಂತ ಸದಸ್ಯರು ಸಾಕ್ಷಿಯಾಗಿದ್ದರು.

ಹಿಂದೂ ಚಾಂದ್ರಮಾನ ಕ್ಯಾಲೆಂಡರ್ ತಿಂಗಳ 'ಭಾದ್ರಪದ'ದ ನಾಲ್ಕನೇ ದಿನದಂದು ಪ್ರಾರಂಭವಾಗುವ ಗಣೇಶ ಚತುರ್ಥಿ ಕಳೆದ ಮಂಗಳವಾರ ಪ್ರಾರಂಭವಾಯಿತು. 'ಅನಂತ ಚತುರ್ದಶಿ'ಯಂದು ಆಚರಣೆ ಕೊನೆಗೊಳ್ಳುತ್ತದೆ. ಹಬ್ಬದ ಅವಧಿಯನ್ನು 'ವಿನಾಯಕ ಚತುರ್ಥಿ' ಅಥವಾ 'ವಿನಾಯಕ ಚೌತಿ' ಎಂದೂ ಕರೆಯಲಾಗುತ್ತದೆ. 

ಇದನ್ನೂ ಓದಿ:ಮಹಾರಾಷ್ಟ್ರ ಸಿಎಂ ಶಿಂಧೆ ನಿವಾಸದಲ್ಲಿ ಗಣಪತಿ ಪೂಜೆ; ಶಾರುಖ್​​, ಸಲ್ಮಾನ್​ ಭಾಗಿ​-ವಿಡಿಯೋ

ABOUT THE AUTHOR

...view details