Tungabhadra Dam: ತುಂಗಭದ್ರಾ ಡ್ಯಾಂನಿಂದ ಕಾಲುವೆಗಳಿಗೆ ನೀರು ಬಿಡುಗಡೆ
ವಿಜಯನಗರ : ಜಲಾಯನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಭರ್ಜರಿಯಾಗಿ ನೀರು ಹರಿದು ಬರುತ್ತಿರುವ ಹಿನ್ನೆಲೆ ರೈತರ ಅನುಕೂಲಕ್ಕಾಗಿ ಶುಕ್ರವಾರ ಎಡದಂಡೆ ಕಾಲುವೆಗಳಿಗೆ ನೀರು ಹರಿಸಲಾಯಿತು. ಜಲಾಶಯದ ಗರಿಷ್ಠ ಮಟ್ಟ 1,633 ಅಡಿ ಇದ್ದು, ನಿನ್ನೆ 1,620ಕ್ಕೆ ತಲುಪಿದೆ. 24 ಗಂಟೆಯಲ್ಲಿ ಸರಾಸರಿ 84,500 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸದ್ಯಕ್ಕೆ 1,07,118 ಕ್ಯೂಸೆಕ್ ಒಳಹರಿವು ಇದೆ. 105.788 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 69 ಟಿಎಂಸಿ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಜುಲೈ 8 ರಂದು ಕೃಷಿ ಚಟುವಟಿಕೆಗಳಿಗೆ ನೀರು ಬಿಡಲಾಗಿತ್ತು. ಆದ್ರೆ, ಈ ಬಾರಿ ಮುಂಗಾರು ವಿಳಂಬವಾದ ಹಿನ್ನೆಲೆ 20 ದಿನ ತಡವಾಗಿ ನೀರು ಹರಿಸಲಾಗಿದೆ. ಕೆಲ ದಿನಗಳಿಂದ ಅಚ್ಚುಕಟ್ಟು ಪ್ರದೇಶದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ಆಂಧ್ರ, ತೆಲಂಗಾಣ ರೈತರು ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದ್ದರು. ಇನ್ನೊಂದೆಡೆ, ಕಾಲುವೆಗೆ ನೀರು ಬಿಟ್ಟಿರುವುದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮೆಣಸಿನಕಾಯಿ, ಭತ್ತದ ನಾಟಿ ಕಾರ್ಯ ಭರದಿಂದ ಸಾಗಿದೆ.
ಇದನ್ನೂ ಓದಿ:ಭರ್ತಿಯಾದ ಹರಿಹರದ ದೇವರಬೆಳೆಕೆರೆ ಪಿಕಪ್ ಡ್ಯಾಂ: ಮನಮೋಹಕ ದೃಶ್ಯ