ಕರ್ನಾಟಕ

karnataka

ETV Bharat / videos

ಮಾದಪ್ಪನ‌ ದೀಪಾವಳಿ ತೇರು ಸಂಪನ್ನ: ಡ್ರೋನ್​ನಲ್ಲಿ ವೈಭವದ ದೃಶ್ಯ ಸೆರೆ - rathotsava of diwali fair at male mahadeshwar hill

By

Published : Oct 26, 2022, 2:30 PM IST

Updated : Feb 3, 2023, 8:30 PM IST

ಚಾಮರಾಜನಗರ: ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ರಥೋತ್ಸವ ಇಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಬೆಳಗ್ಗೆ 9.15ಕ್ಕೆ ರಥಕ್ಕೆ ಚಾಲನೆ ಕೊಟ್ಟದ್ದೇ ತಡ ಉಘೇ ಮಾದಪ್ಪ, ಮಾಯ್ಕಾರ ಮಾದಪ್ಪ ಎಂಬ ಲಕ್ಷಾಂತರ ಧ್ವನಿಗಳ ಜಯಘೋಷ ಮಾರ್ದನಿಸಿತು.‌ ಅಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉತ್ಸಾಹದಿಂದ ರಥ ಎಳೆದು ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು. ರಥೋತ್ಸವದ ಹಿನ್ನೆಲೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದ್ದು, ಕಳೆದ 4 ದಿನಗಳಿಂದ ಲಕ್ಷಾಂತರ ಮಂದಿ ಭಕ್ತರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿ ದರ್ಶನ ಪಡೆದಿದ್ದಾರೆ. ಮಹದೇಶ್ವರನ ಪ್ರಸಾದವಾದ ಲಾಡು ಕಳೆದ 2 ದಿನದಿಂದ ಎರಡೂವರೆ ಲಕ್ಷಕ್ಕೂ ಹೆಚ್ಚು ಮಾರಾಟವಾಗಿದೆ.‌
Last Updated : Feb 3, 2023, 8:30 PM IST

ABOUT THE AUTHOR

...view details