ಅಡುಗೆ ಮನೆಯ ಪಾತ್ರೆಯಲ್ಲಿ ಅಡಗಿ ಕುಳಿತಿದ್ದ ಹಾವು ರಕ್ಷಣೆ - ಈಟಿವಿ ಭಾರತ ಕನ್ನಡ
ತುಮಕೂರು: ಅಡುಗೆ ಮನೆಯ ಪಾತ್ರೆಯೊಂದರಲ್ಲಿ ಕೇರೆಹಾವು ಪತ್ತೆಯಾಗಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಗೊಟ್ಟಿಗೆರೆ ಗ್ರಾಮದಲ್ಲಿ ನಡೆದಿದೆ. ರವಿ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಹಿಂಭಾಗದಲ್ಲಿದ್ದ ಪಾತ್ರಯೊಳಗೆ ಹಾವು ಅಡಗಿ ಕುಳಿತಿತ್ತು. ಅನುಮಾನಗೊಂಡು ರವಿಯವರು ನೋಡಿದಾಗ ಪಾತ್ರಯೊಳಗೆ ಹಾವು ಕುಳಿತಿರುವುದು ಕಂಡು ಬಂದಿದೆ. ಕೂಡಲೇ ಉರಗತಜ್ಞ ಮಹಾಂತೇಶ್ ಎಂಬುವರಿಗೆ ವಿಷಯ ತಿಳಿಸಿದ್ದರು. ಅವರು ಸ್ಥಳಕ್ಕೆ ಬಂದು ಹಾವನ್ನು ರಕ್ಷಣೆ ಮಾಡಿದ್ದಾರೆ.
Last Updated : Feb 3, 2023, 8:36 PM IST