ಮಲ್ಪೆ ಮೀನುಗಾರರ ಬಲೆಗೆ ಬಿದ್ದ 16 ಕೆಜಿ ತೂಕದ ಬಂಗಾರ ಬಣ್ಣದ ಮೀನು- ವಿಡಿಯೋ - ETV Bharat Kannada News
ಉಡುಪಿ :ಮಲ್ಪೆ ಕಡಲ ತೀರದಲ್ಲಿ ಅಪರೂಪದ ಬಂಗಾರ ಬಣ್ಣದ ಮೀನು ಸೆರೆಸಿಕ್ಕಿದೆ. ಅಂಜಲ್ ಮೀನು ಇದಾಗಿದ್ದು ಸುಮಾರು 16 ಕೆಜಿ ಗಾತ್ರವಿದೆ. ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಇದು ಮೀನುಗಾರರ ಬಲೆ ಸೇರಿದೆ. ಕೆ.ಜಿಗೆ 600 ರೂ.ಯಂತೆ ಮಲ್ಪೆಯ ಸುರೇಶ್ ಎಂಬುವವರು 9,600 ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಈ ಜಾತಿಯ ಮೀನು ಹೆಚ್ಚಾಗಿ ಅಟ್ಲಾಂಟಿಕ್ ಸರೋವರದಲ್ಲಿ ಕಂಡುಬರುತ್ತದಂತೆ. ಪ್ರಾಕೃತಿಕ ಬದಲಾವಣೆ ಇಲ್ಲವೇ ಆನುವಂಶಿಕ ಕಾರಣದಿಂದಾಗಿ ಇವುಗಳ ಮೈಬಣ್ಣ ಬಂಗಾರದಂತಿರಲು ಸಾಧ್ಯವಿದೆ ಎನ್ನುತ್ತಾರೆ ತಜ್ಜರು.
ಇದನ್ನೂ ಓದಿ:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಸಾಲದು, ದೇಶ ರಾಮರಾಜ್ಯವಾಗಬೇಕು: ಪೇಜಾವರ ಶ್ರೀ