ನೂರಾರು ವಿದೇಶಿಗರಿಂದ ಅಂಜನಾದ್ರಿಯಲ್ಲಿ ಮೊಳಗಿದ ರಾಮನಾಮ - ಇಸ್ಕಾನ್ ತಂಡ
ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿ ದೇಗುಲದಲ್ಲಿ ಗುರುವಾರ ನೂರಾರು ಸಂಖ್ಯೆಯಲ್ಲಿ ಸೇರಿದ ವಿದೇಶಿಗರು ಸಾಮೂಹಿಕವಾಗಿ ರಾಮನಾಮ ಜಪ, ಭಜನೆ ಮಾಡುವ ಮೂಲಕ ಗಮನ ಸೆಳೆದರು. ಹನುಮದ್ ವ್ರತದ ಅಂಗವಾಗಿ ಕಳೆದ ಮೂರು ದಿನಗಳಿಂದ ವಿದೇಶಿಗರಿಗೆ ದೇಗುಲ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಹಂಪೆ-ಆನೆಗೊಂದಿ ಪ್ರವಾಸಕ್ಕೆ ಬರುವ ವಿದೇಶಿಗರಿಗೆ ಗುರುವಾರದಿಂದ ಮತ್ತೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಗುರುವಾರ ಬೆಂಗಳೂರಿನಿಂದ ಆಗಮಿಸಿದ್ದ ಇಸ್ಕಾನ್ ತಂಡದೊಂದಿಗೆ ನೂರಾರು ವಿದೇಶಿಗರು ಸೇರಿ ಸುಮಾರು ಅರ್ಧ ಗಂಟೆಗೆ ಹೆಚ್ಚು ಕಾಲ ರಾಮನಾಮ ಜಪ ಮಾಡಿದರು.
Last Updated : Feb 3, 2023, 8:35 PM IST