ವೇದಿಕೆ ಮೇಲೆ ಕಣ್ಣೀರು ಹಾಕಿದ ಶಾಸಕ ರಮೇಶ್ ಕುಮಾರ್: ವಿಡಿಯೋ - ಈಟಿವಿ ಭಾರತ್ ಕನ್ನಡ
ಕೋಲಾರ: ಶ್ರೀನಿವಾಸಪುರ ಗೌನಿಪಲ್ಲಿ ಗ್ರಾಮದಲ್ಲಿಂದು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶ್ರೀನಿವಾಸ್ ಎಂಬುವವರು ಶಾಸಕ ರಮೇಶ್ ಕುಮಾರ್ ಕುರಿತು ಮಾತನಾಡುತ್ತಿದ್ದರು. ಇದನ್ನು ಕೇಳಿ ವೇದಿಕೆ ಮೇಲಿದ್ದ ರಮೇಶ್ ಕುಮಾರ್ ಕಣ್ಣೀರು ಹಾಕಿದರು. "ಶ್ರೀನಿವಾಸಪುರಕ್ಕೆ ಒಬ್ಬರೇ ಶಾಸಕರು. ಅದು ರಮೇಶ್ ಕುಮಾರ್ ಅವರೇ ಆಗಿರಬೇಕು. ಎಲ್ಲ ಧರ್ಮಗಳ ರಕ್ಷಣೆ ಮಾಡುತ್ತಿರುವ ಅವರು ತಾವು ಸಾಯುವವರೆಗೂ ಶಾಸಕರಾಗಿಯೇ ಇರಬೇಕು" ಎಂದರು. ಇದನ್ನು ಕೇಳಿದ ರಮೇಶ್ ಕುಮಾರ್ ಭಾವುಕರಾಗಿ, ನೆರೆದಿದ್ದ ಜನರಿಗೆ ನಮಸ್ಕರಿಸಿದರು.
ಇದೇ ವೇಳೆ ಬೇರೆ ಪಕ್ಷಗಳಿಂದ ಬಂದವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಳ್ಳಲಾಯಿತು. ಸಭೆಯಲ್ಲಿ ಮಾತನಾಡಿದ ಜಮೀರ್ ಅಹ್ಮದ್, "ರಮೇಶ್ ಕುಮಾರ್ ಅವರನ್ನು 3ನೇ ಬಾರಿಗೆ ಗೆಲ್ಲಿಸುವ ಮೂಲಕ ಇತಿಹಾಸ ಸೃಷ್ಟಿಸಬೇಕು. ಹ್ಯಾಟ್ರಿಕ್ ಗೆಲುವಿನ ಮೂಲಕ ಅವರಿಗೆ ಶಕ್ತಿ ಕೊಡಿ" ಎಂದು ಮನವಿ ಮಾಡಿದರು.
ಇದನ್ನೂ ಓದಿ:224 ಕ್ಷೇತ್ರದಲ್ಲೂ ಸಿದ್ದರಾಮಯ್ಯ ಅವರನ್ನು ಕರೆಯುತ್ತಿದ್ದಾರೆ: ಜಮೀರ್ ಅಹ್ಮದ್