ಬೆಂಗಳೂರು ನಗರದಲ್ಲಿ ಅದ್ಧೂರಿ ರಾಮನವಮಿ ಆಚರಣೆ.. ವಿವಿಧ ದೇವಾಲಯಗಳಲ್ಲಿ ಹೋಮ ಹವನ - ಅದ್ಧೂರಿ ರಾಮನ ಮೆರವಣಿಗೆ
ಬೆಂಗಳೂರು : ದೇಶಾದ್ಯಂತ ರಾಮನವಮಿಯನ್ನು ಶ್ರದ್ಧೆ, ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಎಲ್ಲ ರಾಮಮಂದಿರ, ಆಂಜನೇಯ ಮತ್ತು ಶ್ರೀಕೃಷ್ಣ ದೇವಸ್ಥಾನಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ದೇವಾಲಯಗಳಲ್ಲಿ ಹೋಮ, ಹವನ, ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ.
ಹಬ್ಬದ ಅಂಗವಾಗಿ ಬೆಂಗಳೂರಿನ ನಾನಾಭಾಗಗಳಲ್ಲಿ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ನಗರದ ಹಲವು ರಾಮಮಂದಿರ ಮತ್ತು ಆಂಜನೇಯನ ದೇವಸ್ಥಾನಗಳಲ್ಲಿ ಭಕ್ತರಿಗೆ ಮಜ್ಜಿಗೆ, ಪಾನಕ ಮತ್ತು ಕೋಸಂಬರಿ ವಿತರಣೆ ಮಾಡಲಾಗುತ್ತಿದೆ.
ಇಸ್ಕಾನ್ ದೇವಾಲಯದಲ್ಲಿ ವಿಶೇಷ ಪೂಜೆ :ಯಶವಂತಪುರದ ಇಸ್ಕಾನ್ ದೇವಸ್ಥಾನದಲ್ಲಿ ರಾಮನವಮಿ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಭಕ್ತಾದಿಗಳಿಗೆ ಪ್ರಸಾದ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಇದನ್ನೂ ಓದಿ:ರಾಮನವಮಿ ಹಿನ್ನೆಲೆ ಮಾಂಸ ಮಾರಾಟ, ಪ್ರಾಣಿವಧೆ ನಿಷೇಧ: ಬಿಬಿಎಂಪಿ ಸುತ್ತೋಲೆ
ರಾಜಾಜಿನಗರದಲ್ಲಿರುವ ರಾಮಮಂದಿರದಲ್ಲಿ ರಥೋತ್ಸವ: ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ರಾಜಾಜಿನಗರದಲ್ಲಿರುವ ರಾಮಮಂದಿರದ ರಾಜಬೀದಿಯಲ್ಲಿ ಚಂಡೆ, ನಾದಸ್ವರದ ಮೂಲಕ ರಾಮನ ರಥೋತ್ಸವ ಜರುಗಿತು. ಅದ್ಧೂರಿ ರಾಮನ ಮೆರವಣಿಗೆಗೆ ಸಾರ್ವಜನಿಕರು ಸಾಕ್ಷಿಯಾದರು.
ಇದನ್ನೂ ಓದಿ :ಮಲೆಮಹದೇಶ್ವರ ದೇಗುಲದ ಹುಂಡಿ ಎಣಿಕೆ: 22 ದಿನಕ್ಕೆ 1.82 ಕೋಟಿ ರೂಪಾಯಿ ಸಂಗ್ರಹ