ಮಿನಿ ಬಸ್ ಪಲ್ಟಿ: ಇಬ್ಬರ ಸಾವು 12 ಜನರಿಗೆ ಗಾಯ - Etv Bharat Kannada
ರಜೌರಿ (ಜಮ್ಮು ಮತ್ತು ಕಾಶ್ಮೀರ): ರಜೌರಿ ಜಿಲ್ಲೆಯ ಕೇವಾಲ್ ಗ್ರಾಮದಲ್ಲಿ ಮಿನಿ ಬಸ್ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ. ಮೃತರನ್ನು ಕೇವಾಲ್ ನಿವಾಸಿ ಶಕೀಲ್ ಅಹ್ಮದ್ ಮತ್ತು ಕಂಡಿ ನಿವಾಸಿ ಬದರ್ ಹುಸೇನ್ ಎಂದು ಗುರುತಿಸಲಾಗಿದೆ. 14 ಜನ ಪ್ರಯಾಣಿಕರಿದ್ದ ಮಿನಿ ಬಸ್ ರಸ್ತೆ ತಿರುವಿನಲ್ಲಿ ಪಲ್ಟಿಯಾಗಿದೆ. ಇಬ್ಬರು ಸಾವನ್ನಪ್ಪಿದರೇ 12 ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆ ನಡೆದ ಬಗ್ಗೆ ಮಾಹಿತಿ ಪಡೆದ ಕಂಡಿ ಬ್ಲಾಕ್ ವೈದ್ಯಾಧಿಕಾರಿ, ಡಾ.ಇಕ್ಬಾಲ್ ಮಲಿಕ್ ಸ್ಥಳಕ್ಕೆ ಆಗಮಿಸಿ ಕೂಡಲೇ ಗಾಯಾಳುಗಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸುವಂತೆ ತಿಳಿಸಿದ್ದಾರೆ.
ಅದರಂತೆ 14 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಇಬ್ಬರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಉಳಿದ 12 ಗಾಯಾಳುಗಳನ್ನು ಅಲ್ಲಿಂದ ರಜೌರಿಯ ಜಿಎಂಸಿ ಅಸೋಸಿಯೇಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ನೀಡಾಲಾಗುತ್ತದೆ ಎಂದು ತಿಳಿಸಿದರು. ಬುಧಾಲ್‌ನಿಂದ ಕಾಂಡಿಗೆ ಮಿನಿಬಸ್ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:Watch... ರಸ್ತೆ ದಾಟುತ್ತಿದ್ದ ಬಾಲಕಿಯರಿಗೆ ಕಾರು ಡಿಕ್ಕಿ: ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ