ರಾಜಸ್ಥಾನ ಸಚಿವರ ಸೋದರಳಿಯನಿಂದ ಹೋಟೆಲ್ನಲ್ಲಿ ದಾಂಧಲೆ: ಸಿಸಿಟಿವಿ ವಿಡಿಯೋ - ಜೈಪುರದಲ್ಲಿರುವ ಹೋಟೆಲ್ ಮೇಲೆ ದಾಳಿ
ಜೈಪುರ್ (ರಾಜಸ್ಥಾನ) :ರಾಜ್ಯ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಅವರ ಸೋದರಳಿಯ ಜೈಪುರದಲ್ಲಿರುವ ಹೋಟೆಲ್ನಲ್ಲಿ ದಾಂಧಲೆ ನಡೆಸಿದ್ದಾರೆ. ಇಲ್ಲಿನ ಹೋಟೆಲೊಂದರಲ್ಲಿ ಮಂಗಳವಾರ ತಡರಾತ್ರಿ ಘಟನೆ ನಡೆದಿದೆ. ಸಚಿವರ ಸೋದರಳಿಯ ಮತ್ತು ಆತನ ಸ್ನೇಹಿತರು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇಡೀ ಘಟನೆ ಹೋಟೆಲ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ, ಸಚಿವರ ಸೋದರಳಿಯ ಹರ್ಷದೀಪ್ ಖಚರಿಯಾವಾಸ್ ಮೊದಲು ಹೋಟೆಲ್ನ ಮುಂಭಾಗದ ಕೌಂಟರ್ನಲ್ಲಿ ಇರಿಸಿದ್ದ ನೀರಿನ ಬಾಟಲಿಗಳನ್ನು ಕೈಯಿಂದ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಈ ವೇಳೆ ಜೊತೆಗಿದ್ದ ಗೆಳೆಯರು ಆತನನ್ನು ತಡೆಯಲು ಮುಂದಾಗಿದ್ದಾರೆ. ಜಗಳ ತಡೆಯಲು ಬಂದ ಹೋಟೆಲ್ ಸಿಬ್ಬಂದಿ ಜೊತೆಗೆ ಮಾತಿನ ಚಕಮಕಿ ನಡೆದಿದೆ.
ಮಾತಿಗೆ ಮಾತು ಬೆಳೆದು ಹರ್ಷದೀಪ್ ಹೋಟೆಲ್ ಸಿಬ್ಭಂದಿ ಮೇಲೂ ಹಲ್ಲೆ ಮಾಡಿದ್ದಾರೆ. ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳು ಪೊಲೀಸರ ಮುಂದೆಯೂ ಹಲ್ಲೆಗೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಹೋಟೆಲ್ನಲ್ಲಿದ್ದ ವಸ್ತುಗಳನ್ನು ಪುಡಿಗೈದಿದ್ದಾರೆ. ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ :ಇಬ್ಬರು ಭಯೋತ್ಪಾದಕ ಶಂಕಿತರನ್ನು ಬಂಧಿಸಿದ ಪುಣೆ ಪೊಲೀಸರು!