ಮಂಡ್ಯದಲ್ಲಿ ಮಳೆ: ನೀರಿನಲ್ಲಿ ಕೊಚ್ಚಿಹೋದ ಗೂಡ್ಸ್ ವಾಹನ - ಚಾಲಕ ಪಾರು - etv bharata kannada
ಮಂಡ್ಯ: ಮಂಡ್ಯದಲ್ಲಿ ಮಳೆ ಮುಂದುವರಿದಿದ್ದು ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದೆ. ನಾಗಮಂಗಲ ತಾಲೂಕಿನ ಅಣೆಚನ್ನಾಪುರ ಗ್ರಾಮದ ಹಳ್ಳಕ್ಕಿರುವ ಸೇತುವೆ ಜಲಾವೃತಗೊಂಡಿದ್ದು, ನೀರಿನ ರಭಸಕ್ಕೆ ಗೂಡ್ಸ್ ವಾಹನ ಕೊಚ್ಚಿ ಹೋಗಿದೆ. ಬ್ರಿಡ್ಜ್ ಮೇಲೆ ವಾಹನ ಸಂಚಾರ ನಿಷೇಧಿಸಿ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿತ್ತು. ಆದರೂ ಚಾಲಕನ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದೆ. ವಾಹನ ಕೊಚ್ಚಿ ಹೋಗುತ್ತಿದ್ದಂತೆ ವಾಹನದಿಂದ ಜಿಗಿದು ಚಾಲಕ ಪ್ರಾಣ ಉಳಿಸಿಕೊಂಡಿದ್ದಾನೆ.
Last Updated : Feb 3, 2023, 8:25 PM IST