ಪೊಲೀಸ್ ಕ್ರೀಡಾಕೂಟ: ಜಾನಪದ ಹಾಡಿಗೆ ರಾಯಚೂರು ಎಸ್ಪಿ ಸಖತ್ ಡ್ಯಾನ್ಸ್
Published : Dec 2, 2023, 6:17 PM IST
ರಾಯಚೂರು:ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿತ್ತು. ಜಿಲ್ಲಾ ಮಾಧ್ಯಮ ತಂಡ ಹಾಗೂ ಪೊಲೀಸ್ ತಂಡಗಳ ನಡುವೆ ಕ್ರಿಕೆಟ್ ಹಣಾಹಣಿ ನಡೆಯಿತು. ಆರಂಭದಲ್ಲಿ ಬ್ಯಾಟ್ ಮಾಡಿದ ಮಾಧ್ಯಮ ತಂಡದವರು 10 ಓವರ್‌ಗಳಲ್ಲಿ 44 ರನ್ ಗಳಿಕೆ ಮಾಡಿದ್ದರು. ಬಳಿಕ, 45 ರನ್ಗಳ ಗುರಿ ಬೆನ್ನತ್ತಿದ ಪೊಲೀಸ್ ತಂಡ ಗೆಲುವಿನ ನಗೆ ಬೀರಿತು.
ಪೊಲೀಸ್ ತಂಡದ ಗೆಲುವಿನ ಸಂಭ್ರಮ:ಗೆಲುವಿನ ಸಂಭ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಹಾಗೂ ಪೊಲೀಸ್ ಅಧಿಕಾರಿಗಳು ಕುಣಿದು ಕುಪ್ಪಳಿಸಿದರು. ಜಿಗಿತಾಳೋ ಜಿಗಿತಾಳೋ.. ಎಂಬ ಜಾನಪದ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಎಸ್ಪಿಗೆ ಸಾಥ್ ಆಗಿ ಹೆಚ್ಚುವರಿ ಅಧೀಕ್ಷಕರು, ಡಿವೈಎಸ್ಪಿಗಳು, ಸಿಪಿಐ ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಡ್ಯಾನ್ಸ್ ಮಾಡಿದರು. ಜೊತೆಗೆ, ಪತ್ರಕರ್ತ ಮಿತ್ರರೂ ಕೂಡ ಸ್ಟೆಪ್ ಹಾಕಿ ಸಂತಸಪಟ್ಟರು.
ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಪುರುಷ ಹಾಗೂ ಮಹಿಳಾ ಸಿಬ್ಬಂದಿ ಓಟ, ಉದ್ದ ಜಿಗಿದ ಹಾಗೂ ಎತ್ತರ ಜಿಗಿತ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದರು.