ಭಾರತ್ ಜೋಡೋ ಯಾತ್ರೆ: ಮಹಾರಾಷ್ಟ್ರದ ಅಕೋಲಾದಿಂದ ಪುನರಾರಂಭ - Bharat Jodo Yatra
ಅಕೋಲಾ: ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮಹಾರಾಷ್ಟ್ರದ ಅಕೋಲಾದ ಪತೂರ್‌ನಿಂದ ಇಂದು ಬೆಳಗ್ಗೆ 6 ಗಂಟೆಗೆ 'ಭಾರತ್ ಜೋಡೋ ಯಾತ್ರೆ' ಪುನರಾರಂಭಿಸಿದರು. ರಾಜ್ಯದಲ್ಲಿ 11ನೇ ದಿನದ ಯಾತ್ರೆ ಸಾಗುತ್ತಿದ್ದು, ವಾಲೇಗಾಂವ್ ಮೂಲಕ ಯಾತ್ರೆ ಬಾಗ್ ಫಾಟಾ ತಲುಪಲಿದೆ. ಬಾಳಾಪುರ ತಾಲೂಕಿನ ಬಾಗ್ ಫಾಟಾದಲ್ಲಿ ಇಂದಿನ ಪಾದಯಾತ್ರೆ ಕೊನೆಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Last Updated : Feb 3, 2023, 8:32 PM IST