ಮಹಾರಾಷ್ಟ್ರದ ಹಿಂಗೋಲಿಯಿಂದ ಸಾಗಿದ ಭಾರತ್ ಜೋಡೋ ಯಾತ್ರೆ - ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಹಿಂಗೋಲಿ(ಮಹಾರಾಷ್ಟ್ರ): ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಇಂದು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಿಂದ ಮತ್ತೆ ಆರಂಭವಾಗಿದೆ. ಭಾನುವಾರ ಒಂದು ದಿನ ವಿರಾಮ ಪಡೆದುಕೊಂಡಿದ್ದು ಇದೀಗ ಹಿಂಗೋಲಿ ಜಿಲ್ಲೆಯ ಕಳಮ್ನೂರಿನಿಂದ ವಾಶಿಮ್‌ಗೆ ತೆರಳಲಿದೆ. ಮಹಾರಾಷ್ಟ್ರದಲ್ಲಿ ಯಾತ್ರೆಯ ಆರನೇ ದಿನವಾದ ಶನಿವಾರ ರಾತ್ರಿ ಕಳಂನೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಭಾರತವನ್ನು ವಿಭಜಿಸಲು ಸಾಧ್ಯವಿಲ್ಲ ಮತ್ತು ದ್ವೇಷವನ್ನು ಹರಡಲು ಬಿಡುವುದಿಲ್ಲ ಎಂಬುದು ತಮ್ಮ ನೇತೃತ್ವದ ಪಾದಯಾತ್ರೆಯ ಸಂದೇಶ' ಎಂದಿದ್ದರು. ಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಶನಿವಾರ 66ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೆ ಆರು ರಾಜ್ಯಗಳ 28 ಜಿಲ್ಲೆಗಳಲ್ಲಿ ಸಂಚರಿಸಿದೆ.
Last Updated : Feb 3, 2023, 8:32 PM IST