ಪಂಜಾಬ್ನ ಲೂಧಿಯಾನದಲ್ಲಿ ಭಾರತ್ ಜೋಡೋ ಯಾತ್ರೆ.. ವಿಡಿಯೋ - ಈಟಿವಿ ಭಾರತ ಕನ್ನಡ
ಲೂಧಿಯಾನ(ಪಂಜಾಬ್):ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಪಂಜಾಬಿನ ಲೂಧಿಯಾನವನ್ನು ತಲುಪಿದೆ. ಲೂಧಿಯಾನ ವಿಧಾನಸಭಾ ಕ್ಷೇತ್ರದ ಸಾಹ್ನೆವಾಲ್ ಮತ್ತು ಧಂಡಾರಿಯಿಂದ ಹೊರಟ ಯಾತ್ರೆ ಸಮರಾಲಾ ಚೌಕ್ನಲ್ಲಿ ಸಂಪನ್ನಗೊಂಡಿತು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ನಾವು ಭಾರತ ಜೋಡೋ ಯಾತ್ರೆಯ ಮೂಲಕ ಭಾರತವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ, ಅವರು ಭಾರತವನ್ನು ಒಡೆಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ಭಾರತ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ ಎಂದರು. ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.