ಕರ್ನಾಟಕ

karnataka

ಟ್ರಕ್‌ನಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ

ETV Bharat / videos

ಟ್ರಕ್‌ನಲ್ಲಿ ಪ್ರಯಾಣಿಸಿ ಚಾಲಕರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ: ವಿಡಿಯೋ ವೈರಲ್​ - ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

By

Published : May 23, 2023, 12:33 PM IST

ನವದೆಹಲಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ರಾತ್ರಿ ಟ್ರಕ್‌ನಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 'ವಾಹನ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿಯಲು ರಾಹುಲ್ ಗಾಂಧಿ ದೆಹಲಿಯಿಂದ ಹೊರಟು ಅಂಬಾಲಾದಿಂದ ಚಂಡೀಗಢದವರೆಗೆ ಟ್ರಕ್‌ನಲ್ಲಿ ಪ್ರಯಾಣಿಸಿದರು' ಎಂದು ಕಾಂಗ್ರೆಸ್‌ ಟ್ವೀಟ್​ ಮಾಡಿದೆ.

ರಾಹುಲ್‌ ದೆಹಲಿಯಿಂದ ಚಂಡೀಗಢವರೆಗೂ ಟ್ರಕ್‌ ಡ್ರೈವರ್‌ಗಳೊಂದಿಗೆ ತೆರಳಿ ಅವರ ಕಷ್ಟಗಳನ್ನು ಆಲಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ದೇಶದಲ್ಲಿ ಸುಮಾರು 90 ಲಕ್ಷ ಟ್ರಕ್‌ ಚಾಲಕರಿದ್ದಾರೆ. ಅವರಿಗೆ ಅವರದೇ ಆದ ಕಷ್ಟಗಳಿವೆ. ಅವರ ಮನ್‌ ಕೀ ಬಾತ್‌ ಕೇಳುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ಕಾಂಗ್ರೆಸ್​ ಟ್ವೀಟ್​​ನಲ್ಲಿ ಬರೆದುಕೊಂಡಿದೆ. ಟ್ವೀಟ್​ನಲ್ಲಿರುವ ವಿಡಿಯೋದಲ್ಲಿ ರಾಹುಲ್​ ಗಾಂಧಿ ಟ್ರಕ್‌ ಚಾಲಕರೊಂದಿಗೆ ಮಾತನಾಡುವ ದೃಶ್ಯಗಳಿವೆ.

ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಘರ್ಹಿ ಅವರು ಟ್ವಿಟರ್‌ನಲ್ಲಿ ರಾಹುಲ್ ಗಾಂಧಿ ಟ್ರಕ್‌ನೊಳಗೆ ಕುಳಿತು ಬೆಂಬಲಿಗರತ್ತ ಕೈ ಬೀಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಮತ್ತೊಬ್ಬ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಟೆ, ರಾಹುಲ್ ಈ ರಾಷ್ಟ್ರದ ಜನರ ಧ್ವನಿ ಆಲಿಸಲು ಬಯಸುತ್ತಾರೆ ಮತ್ತು ದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಹೋರಾಟಗಳನ್ನು ಅರ್ಥಮಾಡಿಕೊಳ್ಳುವ ತುಡಿತ ಹೊಂದಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:  ಫುಡ್​ ಡೆಲಿವರಿ ಬಾಯ್ ದ್ವಿಚಕ್ರ ವಾಹನದಲ್ಲಿ ರಾಹುಲ್ ಗಾಂಧಿ​ ಸಂಚಾರ.. ಸಂವಾದ

ABOUT THE AUTHOR

...view details